Home ತಾಜಾ ಸುದ್ದಿ ಬಿಜೆಪಿಯಿಂದ ಭೀಮಹೆಜ್ಜೆ: ಶತಮಾನದ ಸಂಭ್ರಮಕ್ಕೆ ಚಾಲನೆ

ಬಿಜೆಪಿಯಿಂದ ಭೀಮಹೆಜ್ಜೆ: ಶತಮಾನದ ಸಂಭ್ರಮಕ್ಕೆ ಚಾಲನೆ

0

ಬೆಂಗಳೂರು: ಕರ್ನಾಟಕದ ನಿಪ್ಪಾಣಿಗೆ ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು ಬಂದು ನೂರು ವರ್ಷವಾಗಲಿದೆ, ಶತಮಾನದ ಸಂಭ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿರು.
ಶತಮಾನದ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಪ್ರತಿ ಹಂತದಲ್ಲೂ ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ್ದು, ಚುನಾವಣೆಯಲ್ಲಿ ಅವರನ್ನು ಸೋಲಿಸಿತ್ತು. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಬಗ್ಗೆ ತಿರಸ್ಕಾರ ಭಾವನೆ ಹೊಂದಿದೆ ಎಂಬುದಕ್ಕೆ ಆ ಪಕ್ಷದ ನಡವಳಿಕೆಯೇ ಕಾರಣವಾಗಿದೆ. ಗಾಂಧೀಜಿ ಅವರು ಬೆಳಗಾವಿಗೆ ಬಂದು ಹೋಗಿ 100 ವರ್ಷದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿತು. ಆದರೆ, ನಿಪ್ಪಾಣಿಗೆ ಅಂಬೇಡ್ಕರ್ ಅವರು ಬಂದು 100 ವರ್ಷ ಆಗಿರುವುದರ ಬಗ್ಗೆ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ ಎಂದು ಟೀಕಿಸಿದರು. ಸರಿಯಾಗಿ 100 ವರ್ಷಗಳ ಹಿಂದೆ 1925 ರ ಏಪ್ರಿಲ್ 10, 11 ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಭೇಟಿ ನೀಡಿದ್ದರು. ಬಹಿಷ್ಕೃತ ಹಿತಕಾರಿಣಿ ಸಭಾದ ಎರಡು ದಿನ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಮತ್ತು ವಸತಿ ಶಾಲೆಯ ಅಗತ್ಯದ ಬಗ್ಗೆ ಮಾತನಾಡಿದ್ದರು. ಆ ಐತಿಹಾಸಿಕ ಭೀಮಹೆಜ್ಜೆಗೆ ಶತಮಾನದ ಸಂಭ್ರಮ. ಈ ಭೀಮ ಹೆಜ್ಜೆ ಸಂಭ್ರಮ ಸತತ ಐದು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯಲಿದ್ದು 15 ನೇ ತಾರೀಕಿಗೆ ನಿಪ್ಪಾಣಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಈ ವೇಳೆ ಸಂಸದ ಗೋವಿಂದ ಕಾರಜೋಳ,ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಮತ್ತು ದಲಿತ ಸಂಘಟನೆಯ ನಾಯಕರು ಭಾಗವಹಿಸಿದ್ದರು.

Exit mobile version