Home ನಮ್ಮ ಜಿಲ್ಲೆ ಬೆಂಗಳೂರು 2000ದ ನೋಟು ಕೊಟ್ರೆ ದುಪ್ಪಟ್ಟು ಹಣ ಕೊಡೋದಾಗಿ Rs18 ಲಕ್ಷ ನಾಮ

2000ದ ನೋಟು ಕೊಟ್ರೆ ದುಪ್ಪಟ್ಟು ಹಣ ಕೊಡೋದಾಗಿ Rs18 ಲಕ್ಷ ನಾಮ

0

ಪೂಜೆಯ ನೆಪದಲ್ಲಿ ಸಾರ್ವಜನಿಕರಿಗೆ ಚಲಾವಣೆಯಿಂದ ಹಿಂಪಡೆಯಲಾದ 2,000 ಮುಖಬೆಲೆಯ ನೋಟುಗಳನ್ನು ನೂರು ಪಟ್ಟು ಹೆಚ್ಚಿಸಿ ದುಪ್ಪಟ್ಟಿ ಹಣ ಮಾಡಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ 10 ಮಂದಿ ವಂಚಕರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚಕರಿಂದ 18 ಲಕ್ಷ ರೂ. ಮೌಲ್ಯದ 2,000 ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.ಪೂಜೆಯ ಹೆಸರಿನಲ್ಲಿ ನಕಲಿ ಸ್ವಾಮೀಜಿಯ ವೇಷ ಧರಿಸಿ ವಂಚನೆ ಆರ್‌ಬಿಐನಿಂದ ದೂರು |
10 ಜನ ಖತರ್ನಾಕ್ ವಂಚಕರ ಬಂಧನ.

ಕೆ. ಮೋಹನ್, ಶ್ರೀನಿವಾಸ್ ಮೂರ್ತಿ, ರಾಜು, ಡಿ. ಬಸವರಾಜ್, ಮುನಿಶಾಮಪ್ಪ, ಮಲ್ಲಿಕಾರ್ಜುನ್, ರಾಮಕೃಷ್ಣ, ಪಳ್ಳಿ ಮುರುಳೀಧ‌ರ್, ರಾಮಚಂದ್ರ ಮತ್ತು ಮುಬಾರಕ್ ಬಂಧಿತ ಆರೋಪಿಗಳು. ಇವರಲ್ಲಿ ಮುಬಾರಕ್ ನಕಲಿ ನೋಟುಗಳ ಸರಣಿ ಸಂಖ್ಯೆಗಳನ್ನು ತಿರುಚಿ ಒದಗಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮತ್ತೊಬ್ಬ ಮಹಿಳೆ ಆರೋಪಿಗಾಗಿ ಶೋಧ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಸ್ವಾಮೀಜಿಗಳ ವೇಷ ಧರಿಸಿ ಸಾರ್ವಜ ನಿಕರನ್ನು ಭೇಟಿಯಾಗ್ತಿದ್ದ ಆರೋಪಿಗಳು
  • 2000ದ ನೋಟು ನೀಡಿದ್ರೆ ಮಂತ್ರ ದಿಂದ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ ವಂಚಕರು
  • ಹಣ ತೆಗೆದುಕೊಂಡು ಒಂಟಿಯಾಗಿ ನದಿ, ಕೆರೆ ಬಳಿಗೆ ಜನರನ್ನು ಬರಹೇಳ್ತಿದ್ರು
  • ಪೂಜೆಯ ನೆಪದಲ್ಲಿ ನೋಟನ್ನು ಹಿಡಿದುಕೊಂಡು ಹೊಳೆಯಲ್ಲಿ ಮುಳುಗಿ ಏಳಬೇಕು ಎಂದು ಜನರಿಗೆ ಸೂಚನೆ
  • ಜನರು ಮುಳುಗುತ್ತಿದ್ದಂತೆ ಇತ್ತ ದುಡ್ಡು ತೆಗೆದುಕೊಂಡು ವಂಚಕರು ಪರಾರಿ

ವಂಚಕರು ಸ್ವಾಮೀಜಿಗಳ ವೇಷ ಧರಿಸಿ ಸಾರ್ವಜನಿಕರನ್ನು ಭೇಟಿಯಾಗುತ್ತಿದ್ದರು. ತಮ್ಮ ಬಳಿ ಇರುವ 2,000 ನೋಟುಗಳನ್ನು (ನಿರಂತರ ಕ್ರಮಸಂಖ್ಯೆವುಳ್ಳ 2018ರ ಸರಣಿಯನ್ನು ಹೊರತುಪಡಿಸಿ) ನೀಡಿದರೆ, ಅವುಗಳಿಗೆ ನೂರು ಪಟ್ಟು ಹಣವನ್ನು (ಬಾರಿಷ್) ಮಂತ್ರಬಲದಿಂದ ನೀಡಲಾಗುವುದು ಎಂದು ನಂಬಿಸುತ್ತಿದ್ದರು. ಆ ನೋಟುಗಳು ಸಿಗುವ-ಸ್ಥಳವನ್ನೂ ಅವರೇ ಹೇಳುತ್ತಿದ್ದರು. ಆಮಿಷಕ್ಕೆ ಒಳಗಾದ” ಅಮಾಯಕರು ಆ ನೋಟುಗಳನ್ನು 3ರಷ್ಟು ಹಣ ನೀಡಿ-ಆರೋಪಿಗಳಿಂದ ಪಡೆದುಕೊಳ್ಳುತ್ತಿದ್ದರು.

ನಂತರ ನಕಲಿ ಸ್ವಾಮೀಜಿಗಳಾದ ಬಸವರಾಜ್: ಮಲ್ಲಿಕಾರ್ಜುನ್ ಹಾಗೂ ಮುನಿಶಾಮಪ್ಪ ಅವರುಹಣ ತಂದವರನ್ನು ನದಿ ಅಥವಾ ಕೆರೆಗಳ ಬಳಿಗೆ ಒಬ್ಬಂಟಿಯಾಗಿ ಕರೆದೊಯ್ಯುತ್ತಿದ್ದರು. ಪೂಜೆಯ ನೆಪದಲ್ಲಿ. ಕೆಲವು ನೋಟುಗಳು ಮುಕ್ಕಾಗಿವೆ. ಅವುಗಳನ್ನು ಕೈಯಲ್ಲಿ ಹಿಡಿದುಕೊಂಡು ಹೊಳೆಯಲ್ಲಿ ಮುಳುಗಿ ಏಳಬೇಕು ಎಂದು ಸೂಚಿಸುತ್ತಿದ್ದರು. ಸಂತ್ರಸ್ತರು ನೀರಿನಲ್ಲಿ ಮುಳುಗಿ ಏಳುವಷ್ಟರಲ್ಲಿ, ಆ ಹಣದೊಂದಿಗೆ ನಕಲಿ ಸ್ವಾಮೀಜಿಗಳು ಪರಾರಿ ಆಗುತ್ತಿದ್ದರು.

ಈ ರೀತಿ ವಂಚಿಸಿದ ನೋಟುಗಳನ್ನು ಏಜೆಂಟ್‌ಗಳ ಮೂಲಕ ಡೆಪಾಸಿಟ್ ಮಾಡಿಸಿ, 20, 30 ಸಾವಿರ ರೂ. ಕಡಿಮೆ ಹಣ ಪಡೆದುಕೊಳ್ಳುತ್ತಿದ್ದರು.ಚಲಾವಣೆಯಿಂದ ಹಿಂಪಡೆಯಲಾದ 70 ಅಸಲಿ 2,000 ನೋಟುಗಳ ಸರಣಿ ಸಂಖ್ಯೆಗಳನ್ನು ತಿರುಚಿ ಆರ್‌ಬಿಐ ಬ್ಯಾಂಕ್‌ಗೆ ಠೇವಣಿ ಮಾಡಲಾಗಿತ್ತು. ಈ ಬಗ್ಗೆ ಅನುಮಾನಗೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ವ್ಯವಸ್ಥಾಪಕರೊಬ್ಬರು ಹಲಸೂರು ಗೇಟ್ ಠಾಣೆಗೆ ನೀಡಿದ ದೂರು ನೀಡಿದ್ದರು. ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಜಾಲವನ್ನು ಪತ್ತೆ ಹಚ್ಚಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ನೋಟುಗಳು ತಿರುಚಲ್ಪಟ್ಟಿವೆಯೇ ಇಲ್ಲವೇ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.
ಆರೋಪಿಗಳ ವಂಚನೆಯ ಜಾಲವು ಬೆಂಗಳೂರು, ಯಾದಗಿರಿ, ಹಾವೇರಿ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನವರೆಗೂ ವಿಸ್ತರಿಸಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version