Home ತಾಜಾ ಸುದ್ದಿ ಪ್ರಯಾಣಿಕರ ಗಮನಕ್ಕೆ… ೧೧೬ ಪ್ಯಾಸೆಂಜರ್ ರೈಲುಗಳಿಗೆ ಮರುಸಂಖ್ಯೆ

ಪ್ರಯಾಣಿಕರ ಗಮನಕ್ಕೆ… ೧೧೬ ಪ್ಯಾಸೆಂಜರ್ ರೈಲುಗಳಿಗೆ ಮರುಸಂಖ್ಯೆ

0

ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಒಡೆತನದ ೧೧೬ ಪ್ಯಾಸೆಂಜರ್ ವಿಶೇಷ ರೈಲುಗಳನ್ನು ನಿಯಮಿತ ರೈಲು ಸಂಖ್ಯೆಗಳೊಂದಿಗೆ ಮರುಸಂಖ್ಯೆ ನೀಡಲು ನಿರ್ಧರಿಸಿದೆ. ಅಸ್ತಿತ್ವದಲ್ಲಿರುವ ‘೦’ ಸಂಖ್ಯೆಯ ವ್ಯವಸ್ಥೆಯನ್ನು ‘೫’, ‘೬’ ಅಥವಾ ‘೭’ ನಿಂದ ಪ್ರಾರಂಭವಾಗುವ ಸಂಖ್ಯೆಗಳೊಂದಿಗೆ ಬದಲಾಯಿಸಲಾಗುವುದು. ಈ ಬದಲಾವಣೆ ಜನವರಿ ೧, ೨೦೨೫ ರಿಂದ ಜಾರಿಗೆ ಬರಲಿದೆ.
ಅನಾನುಕೂಲತೆ ತಪ್ಪಿಸಲು ಪ್ರಯಾಣಿಕರು ಪರಿಷ್ಕೃತ ರೈಲು ಸಂಖ್ಯೆಗಳನ್ನು ಗಮನಿಸಬೇಕು ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ. ಹೊಸ ನಿಯಮಿತ ರೈಲು ಸಂಖ್ಯೆಗಳನ್ನು ತಿಳಿಯಲು, ವೆಬ್‌ಸೈಟ್‌ ಸಂಪರ್ಕಿಸಲು ಕೋರಿದ್ದಾರೆ.

Exit mobile version