Home ನಮ್ಮ ಜಿಲ್ಲೆ ಚಿಕ್ಕಮಗಳೂರು ಪೋಸ್ಟ್ ಆಫೀಸ್‌ನಿಂದ ಬೆದರಿಕೆ ಪತ್ರ

ಪೋಸ್ಟ್ ಆಫೀಸ್‌ನಿಂದ ಬೆದರಿಕೆ ಪತ್ರ

0

ಚಿಕ್ಕಮಗಳೂರು: ಸಿ.ಟಿ. ರವಿಗೆ ಬೆದರಿಕೆ ಪತ್ರ ನಗರದ ವಿಜಯಪುರ ಪೋಸ್ಟ್ ಆಫೀಸ್‌ನಿಂದ ಬಂದಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಅವರ ಮನೆಯಿಂದ ಕೂಗಳತೆ ದೂರದಿಂದಲೇ ಬೆದರಿಕೆ ಪತ್ರ ಬಂದಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಸಿ.ಟಿ. ರವಿಗೆ ಬೆದರಿಕೆ ಪತ್ರ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಆಪ್ತ ಸಹಾಯಕ ಚೇತನ್ ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಿ.ಟಿ.ರವಿ ಅವರ ಮನೆಯ ಸಮೀಪವೇ ಇರುವ ವಿಜಯಪುರ ಪೋಸ್ಟ್ ಆಫೀಸ್‌ನಿಂದ ಎಂಬುದು ಗೊತ್ತಾಗಿದೆ. ಇನ್ನೆರಡು ದಿನಗಳ ಒಳಗಾಗಿ ಬೆದರಿಕೆ ಪತ್ರ ಬರೆದವರನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

Exit mobile version