Home ನಮ್ಮ ಜಿಲ್ಲೆ ಕೊಪ್ಪಳ ಪೈಲ್ಸ್ ನೋವು ಸಹಿಸದೇ ಯುವಕ ಆತ್ಮಹತ್ಯೆ

ಪೈಲ್ಸ್ ನೋವು ಸಹಿಸದೇ ಯುವಕ ಆತ್ಮಹತ್ಯೆ

0

ಕುಷ್ಟಗಿ: ಪೈಲ್ಸ್ ಅಸಹನೀಯ ನೋವು ಸಹಿಸದ ಯುವಕನೊಬ್ಬ ಮನನೊಂದು ಆತ್ಮಹತ್ಯೆ‌‌ ಮಾಡಿಕೊಂಡಿರುವ ಘಟನೆ ನಡೆದಿದೆ. ಕುಷ್ಟಗಿ ಪಟ್ಟಣದ ಶರಣಪ್ಪ ತಿಪ್ಪಣ್ಣ ಮಂಡಲಮರಿ (19) ಆತ್ಮಹತ್ಯೆ ಮಾಡಿಕೊಂಡ ಯುವಕ.
ಶರಣಪ್ಪ ತಿಪ್ಪಣ್ಣ ಪೈಲ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದರೂ ಗುಣಮುಖರಾಗದ ಹಿನ್ನೆಲೆ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಕ್ರಿಮಿನಾಶಕ ಸೇವಿಸಿ ಅಸ್ವಸ್ಥನಾಗಿದ್ದ. ಕೂಡಲೇ ಆತನನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗಿದೆ ಡಿ.7ರ ಮೃತಪಟ್ಟಿದ್ದಾನೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version