Home ಅಪರಾಧ ಪುತ್ರನನ್ನೇ ಕೊಲೆ ಮಾಡಿಸಿದ ತಾಯಿ

ಪುತ್ರನನ್ನೇ ಕೊಲೆ ಮಾಡಿಸಿದ ತಾಯಿ

0

ಹೂವಿನಹಡಗಲಿ: ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಮಗನನ್ನು ತಾಯಿಯೇ ತನ್ನ ಪ್ರಿಯಕರನಿಗೆ ಕುಮ್ಮಕ್ಕು ನೀಡಿ ಕೊಲೆ ಮಾಡಿಸಿರುವ ಘಟನೆ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಹಜಾನಂದ ಶಾಲೆಯಲ್ಲಿ ೭ನೇ ತರಗತಿ ಓದುತ್ತಿದ್ದ ಕೆ. ವಿಠಲ್(೧೩) ಕೊಲೆಯಾದ ದುರ್ದೈವಿ ಬಾಲಕ. ಕೊಲೆ ಮಾಡಿರುವ ಆರೋಪದಡಿ ಇಟ್ಟಿಗಿ ಗ್ರಾಮದ ಕ್ಯಾತ್ನ ಮಲ್ಲಪ್ಪ (೩೬), ಕೊಲೆಗೆ ಸಹಕರಿಸಿದ ದಶಮಾಪುರ ಗ್ರಾಮದ ದಾಸರ ಮಂಜುನಾಥ (೩೨) ಹಾಗೂ ಬಾಲಕನ ತಾಯಿ ಕೆ. ಹನುಮಂತಮ್ಮ(೩೬) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಶಾಲೆಯಿಂದ ಮನೆಗೆ ಮರಳಿದ್ದ ಬಾಲಕ ಮೊಬೈಲ್‌ನೊಂದಿಗೆ ಕಾಣೆಯಾಗಿದ್ದ. ತಾಯಿಯೇ ಮಗ ಕಾಣೆಯಾಗಿರುವ ಕುರಿತು ದೂರು ನೀಡಿದ್ದಳು ಎನ್ನಲಾಗಿದೆ. ಇತ್ತ ಪ್ರಿಯಕರ ಮಲ್ಲಪ್ಪ ಮತ್ತು ಮಂಜುನಾಥ ಬಾಲಕನ್ನು ಪುಸಲಾಯಿಸಿ ಮೋಟಾರ್ ಬೈಕ್ ಹತ್ತಿಸಿಕೊಂಡು ಹಗರಿಬೊಮ್ಮನಹಳ್ಳಿ ತಾಲೂಕು ಬೆಣಕಲ್ ಅಡವಿಗೆ ಕರೆದೊಯ್ದಿದ್ದಾನೆ. ಅಲ್ಲಿ ಬಾಲಕ ಧರಿಸಿದ್ದ ಅಂಗಿಯಿಂದಲೇ ಕುತ್ತಿಗೆ ಬಿಗಿದು ಕೊಲೆಗೈದಿದ್ದಾರೆ. ನಂತರ ಮೃತದೇಹವನ್ನು ಅಡವಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹನುಮಂತಮ್ಮನ ಗಂಡ ನೀಲಪ್ಪ ಒಂಭತ್ತು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದ.

Exit mobile version