ಉಡುಪಿ: ಬ್ರಹ್ಮಾವರ ತಾಲೂಕು ಹಂಗಾರಕಟ್ಟೆಯ ಬಾಳೆಕುದ್ರು ಶ್ರೀಮಠದ ಶ್ರೀನೃಸಿಂಹಾಶ್ರಮ ಸ್ವಾಮೀಜಿ ಉತ್ತರಾಧಿಕಾರಿ ಶಿಷ್ಯ ಸ್ವೀಕಾರ ಮಹೋತ್ಸವ ನ.23ರಿಂದ 25ರ ವರೆಗೆ ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಿ ಮಹಾಮಂಟಪ ಆವರಣದಲ್ಲಿ ನಡೆಯಲಿದೆ. ಮಂಗಳೂರು ಸಮೀಪದ ಗುರುಪುರದ ಮಧುಸೂದನ ಭಟ್ ಎಂಬ ವಟುವನ್ನು ಆಯ್ಕೆ ಮಾಡಲಾಗಿದೆ.
ನ.23ರಂದು ಗಣಪತಿ ಪೂಜೆ, ಸನ್ಯಾಸ ಗ್ರಹಣ ಸಂಕಲ್ಪ, ಕೃಚ್ಛ್ರ, ಆದಿತ್ಯಾದಿ ನವಗ್ರಹ ಹೋಮ, ಗೋದಾನ, ಪವಮಾನ, ಪ್ರಾಯಶ್ಚಿತ್ತ ಹೋಮ, ಗಾಯತ್ರಿ ಹೋಮ, ಶ್ರೀಲಕ್ಷ್ಮೀನರಸಿಂಹ ಹೋಮ, ನ.24ರಂದು ಅಷ್ಟಶ್ರಾದ್ಧ, ಮಾತೃಕಾ ಪೂಜಾ, ಪುರುಷಸೂಕ್ತ ಹೋಮ, ವಿರಜಾ ಹೋಮ ನಡೆಯಲಿದೆ. ನ.25ರಂದು ತೀರ್ಥಸ್ನಾನ, ಕಾಷಾಯವಸ್ತ್ರ ಧಾರಣೆ, ಮಹಾಪ್ರಣವ ಮಂತ್ರೋಪದೇಶ, ಜಗನ್ಮಾತೆಯ ದರ್ಶನ, ಯೋಗಪಟ್ಟ ನೆರವೇರಲಿದೆ.