Home ತಾಜಾ ಸುದ್ದಿ ನೇಹಾ ಹತ್ಯೆ ಪ್ರಕರಣ: ಮೇ 3ಕ್ಕೆ ವಿಚಾರಣೆ ಮುಂದೂಡಿಕೆ

ನೇಹಾ ಹತ್ಯೆ ಪ್ರಕರಣ: ಮೇ 3ಕ್ಕೆ ವಿಚಾರಣೆ ಮುಂದೂಡಿಕೆ

0

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣದ ವಿಚಾರಣೆಯು ಹುಬ್ಬಳ್ಳಿಯ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಕೈಗೆತ್ತಿಕೊಂಡಿದ್ದು, ನ್ಯಾಯಮೂರ್ತಿ ಪರಮೇಶ್ವರ ಪ್ರಸನ್ನ ಮೇ 3ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಸಿಐಡಿ ಹಾಗೂ ನೇಹಾ ಹಿರೇಮಠ ಪರವಾಗಿ ಹಿರಿಯ ವಕೀಲ ಮಹೇಶ್ ವೈದ್ಯ ಹಾಜರಾಗಿದ್ದರು. ಆರೋಪಿ ಫಯಾಜ್ ಪರವಾಗಿ ಹಿರಿಯ ವಕೀಲ ಝೆಡ್.ಆರ್. ಮುಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ವಿಚಾರಣೆಯ ಮೊದಲ ದಿನವಾದ್ದರಿಂದ ನ್ಯಾಯಾಧೀಶರು ಮೇ 3ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದ್ದಾರೆ. ಆರೋಪಿ ಫಯಾಜ್ ಕೂಡ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿದ್ದನು.

Exit mobile version