Home ತಾಜಾ ಸುದ್ದಿ ನೇಮೋತ್ಸವದ ಪತಾಕೆ ತೆಗೆಯಲು ಪೊಲೀಸ್ ಆರ್ಡರ್ : ಇದೇನು ಮಂಗಳೂರಿನಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯೆ?

ನೇಮೋತ್ಸವದ ಪತಾಕೆ ತೆಗೆಯಲು ಪೊಲೀಸ್ ಆರ್ಡರ್ : ಇದೇನು ಮಂಗಳೂರಿನಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯೆ?

0

ಅಡ್ಯಾರು: ವಕ್ಫ್  ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಯುವ ಅಡ್ಯಾರು ಪ್ರದೇಶದಲ್ಲಿ ಹಿಂದೂ ಧಾರ್ಮಿಕ ನೇಮೋತ್ಸವಕ್ಕೆ ಹಾಕಲಾದ ಪತಾಕೆ ಬಂಟಿಂಗ್ ಗಳನ್ನು ತೆಗೆಯುವ ಪೊಲೀಸರ ಆದೇಶಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದೇನು ಎ.18ರಂದು ಮಂಗಳೂರಿನಲ್ಲಿ  ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆಯೆ? ನೇಮೋತ್ಸವ ಮೊದಲೇ ನಿಗದಿಯಾಗಿ ಅದರಂತೆ ನಡೆಯುತ್ತಿದೆ.ಪ್ರತಿಭಟನೆ ಇರುವುದಾದರೆ ಕೇಸರಿ ಧ್ವಜ,ಬಂಟಿಂಗ್ ಯಾಕೆ ತೆಗೆಯಬೇಕು?
ಎಂದು ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
ಪೊಲೀಸರು ವಿನಾಕರಣ ಗೊಂದಲ,ಉದ್ವಿಗ್ನ ಸ್ಥಿತಿ ಇದೆ ಎಂಬಂತೆ ತೋರಿಸುತ್ತಿರುವುದು ಸರಿಯಲ್ಲ.ಹೆದ್ದಾರಿಯನ್ನೇ ಬಂದ್ ಮಾಡಿ ಏಕಮುಖ ಸಂಚಾರದ ತೀರ್ಮಾನವೂ ಒಪ್ಪತಕ್ಕದ್ದಲ್ಲ.
ಇವರ ಪ್ರತಿಭಟನೆ ಸರಕಾರದ ವಿರುದ್ದವೋ, ಅಥವಾ ಹಿಂದುಗಳ ವಿರುದ್ಧವೋ ?
ಹಿಂದುಗಳಿಗೆ ಅವರ ನೇಮೋತ್ಸವ, ಧಾರ್ಮಿಕ ಆಚರಣೆ ಮಾಡಲು ಅವಕಾಶ ನೀಡಿ ಯಾವುದಕ್ಕೂ ಅಡ್ಡಿ ಬೇಡ ಎಂದು ಪೊಲೀಸ್ ಇಲಾಖೆಯನ್ನ ಒತ್ತಾಯಿಸಿದ್ದಾರೆ.

Exit mobile version