Home ತಾಜಾ ಸುದ್ದಿ ಮಾದಕ ವಸ್ತು  ಮಾರಾಟ ಮಾಡುತ್ತಿದ್ದವನ ಸೆರೆ

ಮಾದಕ ವಸ್ತು  ಮಾರಾಟ ಮಾಡುತ್ತಿದ್ದವನ ಸೆರೆ

0

ಮಂಗಳೂರು: ದೆಹಲಿಯಿಂದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎನ್ನು ಕೋರಿಯರ್ ಮೂಲಕ ತರಿಸಿಕೊಂಡು ಮಂಗಳೂರಿಗೆ ತಂದು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಎಂಡಿಎಂಎ ಮಾದಕ ವಸ್ತುವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ದ್ವಿಚಕ್ರ ವಾಹನವನ್ನು ಪತ್ತೆ ಹಚ್ಚಿ ಮೊಹಮ್ಮದ್ ಅಶ್ರಪ್ ಅಲಂತಡ್ಕ(50), ತಂದೆ: ಮೊಯಿದ್ದಿನ್ ವಾಸ: ಅಲಂತಡ್ಕ ಹೌಸ್, ಮಣಿಕ್ಕರ ಪೋಸ್ಟ್, ಪೆರುವಾಜೆ ಗ್ರಾಮ, ಸುಳ್ಯ. ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ ರೂ. 1 ಲಕ್ಷ ಮೌಲ್ಯದ 11 ಗ್ರಾಂ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ, ಮೊಬೈಲ್ ಫೋನ್-1, ಹೊಂಡಾ ಅಕ್ಟಿವಾ ಸ್ಕೂಟರ್ ಸಹಿತ  ಒಟ್ಟು ರೂ. 1,60,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ  ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯು ದೆಹಲಿಯಿಂದ ತನ್ನ ಸ್ನೇಹಿತನ ಮೂಲಕ ನಿಷೇಧಿತ ಮಾದಕ ವಸ್ತು ಎಂಡಿಎಂಎ ನ್ನು ಖರೀದಿಸಿಕೊಂಡು ಅದನ್ನು  ಊರಾದ ಸುಳ್ಯದ ವಿಳಾಸಕ್ಕೆ ಕೋರಿಯರ್ ಮೂಲಕ ತರಿಸಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಮಂಗಳೂರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಬಂದು ಮಂಗಳೂರು ನಗರದಲ್ಲಿನ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದನು. 

ಈ ಮಾದಕ ವಸ್ತು ಎಂಡಿಎಂಎ ಮಾರಾಟ/ಸಾಗಾಟದ ಪತ್ತೆ ಕಾರ್ಯವನ್ನು ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ ಎಂ ರವರ ನೇತೃತ್ವದಲ್ಲಿ ಪಿಎಸ್ಐ ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ಎಎಸ್ಐ ಮೋಹನ್ ಕೆ ವಿ, ರಾಮ  ಹಾಗೂ ಸಿಸಿಬಿ ಸಿಬ್ಬಂದಿಯವರು ಕೈಗೊಂಡಿದ್ದರು.

Exit mobile version