Home ಅಪರಾಧ ನೇಣಿಗೆ ಶರಣಾದ ಮಹಿಳೆ

ನೇಣಿಗೆ ಶರಣಾದ ಮಹಿಳೆ

0

ದಾವಣಗೆರೆ: ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆವರಗೆರೆ ಗ್ರಾಮದ ಮಹಾವೀರ ಗೋಶಾಲೆ ಸಮೀಪ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಸಿವಿಬಾಯಿ (೫೬) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕುಟುಂಬದ ಸದಸ್ಯರು ಜಗಳೂರು ತಾಲೂಕಿನ ನರಗನಹಳ್ಳಿ ತಾಂಡಾದ ಸೇವಾಲಾಲ್ ಜಾತ್ರೆಗೆ ಹೋಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದರು. ಯಾರು ಇಲ್ಲದ ವೇಳೆಯಲ್ಲಿ ಬುಧವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಘಟನೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಈ ಘಟನೆ ಕುರಿತು ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version