Home News `ನೀಟ್’ ಪರೀಕ್ಷೆಗೂ ಬಳೆ, ಮೂಗುತಿ, ಓಲೆ, ಕಾಲ್ಗೆಜ್ಜೆ ನಿಷೇಧ!

`ನೀಟ್’ ಪರೀಕ್ಷೆಗೂ ಬಳೆ, ಮೂಗುತಿ, ಓಲೆ, ಕಾಲ್ಗೆಜ್ಜೆ ನಿಷೇಧ!

ಹುಬ್ಬಳ್ಳಿ: ಸಿಇಟಿ ಮತ್ತು ರೈಲ್ವೆ ಪರೀಕ್ಷೆಯಂತೆಯೇ ವೈದ್ಯಕೀಯ ಪ್ರವೇಶಾತಿಗೆ ರಾಷ್ಟ್ರೀಯ ಪರೀಕ್ಷಾ ಮಂಡಳಿಯಿಂದ(ನೀಟ್) ಜರುಗಲಿರುವ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೂ ಮುಂದುವರಿದಿದೆ…
ಮೇ ೪ ರಂದು ಅಂದರೆ ಇನ್ನೆರಡು ದಿನಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಓಲೆ, ಕಾಲುಗೆಜ್ಜೆ, ಬಳೆ, ಮೂಗುತಿ ಧರಿಸಿಕೊಂಡು ಬರುವುದನ್ನು ನಿಷೇಧಿಸಲಾಗಿದೆ. ಈ ಮೂಲಕ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಸಿಇಟಿ ಪರೀಕ್ಷೆ ನಡೆದ ವೇಳೆ ಕೆಲವರ ಜನಿವಾರ ತೆಗೆಸಿ ಹಾಕಲಾಗಿತ್ತು. ನಂತರ ಆಗಿದ್ದು ರೈಲ್ವೆ ಮಂಡಳಿ ನಡೆಸುವ ನೇಮಕಾತಿ ಪರೀಕ್ಷೆಯಲ್ಲೂ ಮಂಗಳಸೂತ್ರ, ಜನಿವಾರ, ಲೋಹದ, ಬಂಗಾರದ ಆಭರಣ ಧರಿಸಿ ಪರೀಕ್ಷೆ ಬರೆಯುವುದನ್ನು ನಿಷೇಧಿಸಲಾಗಿತ್ತು. ಈ ಕುರಿತು ವ್ಯಾಪಕ ಆಕ್ರೋಶ ಸಾರ್ವಜನಿಕ ವಲಯ, ಅಭ್ಯರ್ಥಿಗಳಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ರೈಲ್ವೆ ಸಚಿವರು ಮಧ್ಯಪ್ರವೇಶಿಸಿ ಸೂಚನೆ ನೀಡಿದ್ದರಿಂದ ನಿಷೇಧ ಆದೇಶ ವಾಪಸ್ ಪಡೆಯಲಾಗಿತ್ತು.
ಇದಾದ ನಾಲ್ಕಾರು ದಿನಗಳಲ್ಲಿಯೇ ಮತ್ತೊಂದು ಇಂಥದ್ದೇ ನಿಷೇಧ ಆದೇಶ ನೀಟ್ ಪರೀಕ್ಷಾರ್ಥಿಗಳಿಗೆ ಎದುರಾಗಿದೆ. (ಯು.ಜಿ-೨೦೨೫ ರ) ಮಾಹಿತಿ ಕೈಪೀಡಿಯಲ್ಲಿ ಉಲ್ಲೇಖಿಸಿದಂತ ವಸ್ತುಗಳನ್ನು ಪರೀಕ್ಷಾ ಕೊಠಡಿಯಯಿಂದ ನಿಷೇಧಿಸಲಾಗಿದೆ ಎಂದು ಪರೀಕ್ಷಾರ್ಥೀಗಳಿಗೆ ನೀಡಿದ ಪರೀಕ್ಷಾ ಪ್ರವೇಶ ಪತ್ರದಲ್ಲಿ ತಿಳಿಸಲಾಗಿದೆ. ಇದು ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Exit mobile version