Home ಅಪರಾಧ ನಿಮ್ಮಿಂದ ಪ್ರತಿಭಟನಾಕಾರರನ್ನು ತಡೆಯಬಹುದಷ್ಟೆ, ಪ್ರತಿಭಟನೆಯನ್ನಲ್ಲ…

ನಿಮ್ಮಿಂದ ಪ್ರತಿಭಟನಾಕಾರರನ್ನು ತಡೆಯಬಹುದಷ್ಟೆ, ಪ್ರತಿಭಟನೆಯನ್ನಲ್ಲ…

0

ಬೆಂಗಳೂರು: ನಿಮ್ಮಿಂದ ಪ್ರತಿಭಟನಾಕಾರರನ್ನು ತಡೆಯಬಹುದಷ್ಟೆ, ಪ್ರತಿಭಟನೆಯನ್ನಲ್ಲ ಎಂದು ರಾಜ್ಯ ಬಿಜೆಪಿ ಹೇಳಿದೆ.
ಈ ಕುರಿತಂತೆ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಹಿತ ಪೋಸ್ಟ್‌ ಮಾಡಿದ್ದು ರಾಜ್ಯದ ಸರ್ಕಾರದ ಬಹುಕೋಟಿ ಹಗರಣ ಖಂಡಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ತೆರಳಲಿರುವ ಬಿಜೆಪಿ ಮುಖಂಡರ ಮನೆಗಳ ಮುಂದೆ ಪೊಲೀಸರನ್ನು ನಿಯೋಜಿಸಿ ರಾಜ್ಯ ಬಿಜೆಪಿ ಹೋರಾಟ ಹತ್ತಿಕ್ಕಲು ಹೊರಟಿದೆ ಸಿದ್ದರಾಮಯ್ಯ ಅವರ ರಣಹೇಡಿ ಕಾಂಗ್ರೆಸ್ ಸರ್ಕಾರ.

ಸಿಎಂ ಸಿದ್ದರಾಮಯ್ಯ ಅವರೇ ಇದು ನಿಮ್ಮ ಅಸಲೀ ಮುಖವಾಡವೇ? ಬಡವರಿಗೆ ಹಂಚಬೇಕಿರುವ ಕೋಟಿ ಕೋಟಿ ಬೆಲೆ ಬಾಳುವ ನಿವೇಶನಗಳನ್ನು ನುಂಗಿರುವ ನೀವು, ಹೋರಾಟ ಹತ್ತಿಕ್ಕಲು ಹೊರಟಿರುವ ಗೋಸುಂಬೆ ರಾಜಕೀಯ ಗಮನಿಸಿದರೆ “ಕುಂಬಳಕಾಯಿ ಕಳ್ಳ ಎಂದರೆ ಬುಜ ಮುಟ್ಟಿಕೊಂಡ ಪ್ರಸಂಗ ನೆನಪಿಸುವಂತಿದೆ”. ನಿಮ್ಮಿಂದ ಪ್ರತಿಭಟನಾಕಾರರನ್ನು ತಡೆಯಬಹುದಷ್ಟೆ, ಪ್ರತಿಭಟನೆಯನ್ನಲ್ಲ, ನಾಡಿನ ಜನರ ಮುಂದೆ ನಿಮ್ಮ ಭ್ರಷ್ಟ ಮುಖವಾಡ ಕಳಚಿ ಬಿದ್ದಿದೆ ಎಂದಿದ್ದಾರೆ.

Exit mobile version