Home ನಮ್ಮ ಜಿಲ್ಲೆ ಧಾರವಾಡ ನಾಲಾಯಕ್ ಹೇಳಿಕೆಗೆ ವಿಜಯೇಂದ್ರ ಸಮರ್ಥನೆ

ನಾಲಾಯಕ್ ಹೇಳಿಕೆಗೆ ವಿಜಯೇಂದ್ರ ಸಮರ್ಥನೆ

0

ಹುಬ್ಬಳ್ಳಿ: ಸಚಿವ ಸಂತೋಷ ಲಾಡ್ ಅವರನ್ನು ನಾಲಾಯಕ್' ಎಂದಿರುವ ತಮ್ಮ ವಿರುದ್ಧ ಪ್ರತಿಭಟನೆಗೆ ಕರೆ ಕೊಟ್ಟಿರುವ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತೊಮ್ಮೆ ಟೀಕಿಸಿ, ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಮತ್ತವರ ಸಹೋದ್ಯೋಗಿಗಳು ಎಷ್ಟು ಬಾರಿ ಬಿಜೆಪಿಯವರನ್ನು ನಾಲಾಯಕ್ ಎಂದಿಲ್ಲ? ರಾಜಕೀಯದಲ್ಲಿ ಟೀಕೆಗಳು, ಪ್ರತಿಟೀಕೆಗಳೆಲ್ಲ ಸಾಮಾನ್ಯ. ಅವರು ಕರೆ ಕೊಟ್ಟಿರುವ ಪ್ರತಿಭಟನೆಗೆ ನಾನು ಗಮನ ಕೊಡುವುದಿಲ್ಲ’ ಎಂಬ ಅರ್ಥದಲ್ಲಿ ಬಿಜೆಪಿ ಅಧ್ಯಕ್ಷರು ಮಂಗಳವಾರ ಹುಬ್ಬಳ್ಳಿ ಮಾಧ್ಯಮಗಳ ಜೊತೆ ಮಾತನಾಡುತ್ತ ಹೇಳಿದರು.
ನೇಹಾ ಕೊಲೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುವ ವೇಳೆ ಬಿಜೆಪಿ ಅಧ್ಯಕ್ಷರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರನ್ನು ನಾಲಾಯಕ್ ಎಂದಿದ್ದರು. `ಹಿಂದೂಗಳ ಕೊಲೆಯಾದರೆ ಬಿಜೆಪಿಯವರಿಗೆ ಹಬ್ಬ’ ಎಂಬುದಾಗಿ ಲಾಡ್ ಹೇಳಿದ್ದಕ್ಕೆ ಪ್ರತಿಯಾಗಿ ವಿಜಯೇಂದ್ರ ಈ ರೀತಿ ಪ್ರತಿ ದಾಳಿ ಮಾಡಿದ್ದರು.

Exit mobile version