ಬೆಂಗಳೂರು: ನಟ ಯಶವಂತ್ ಅಭಿನಯದ ‘ನಾನ್ ಪೋಲಿ’ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.
‘ನಾನ್ ಪೋಲಿ’ ಚಿತ್ರಕ್ಕೆ ಯಶವಂತ್ ನಾಯಕ ಮಾತ್ರವಲ್ಲದೆ ಈ ಚಿತ್ರದ ನಿರ್ದೇಶಕರು ಹೌದು ವಿಭಿನ್ನ ಕತೆಯುಳ್ಳ ಈ ಚಿತ್ರಕ್ಕೆ ದಿಶಾ ನಾಯಕಿಯಾಗಿದ್ದು, ಮತ್ತೊಬ್ಬ ನಾಯಕನಾಗಿ ಹರೀಶ್, ಖಳ ನಟನಾಗಿ ದೇವರಾಜ್ ಕಾಣಿಸಿಕೊಂಡಿದ್ದಾರೆ. ಚೇತನ್ ಸಂಗೀತ ನಿರ್ದೇಶನ, ಕೀರ್ತಿವರ್ಧನ್ ಛಾಯಾಚಿತ್ರಗ್ರಹಣವಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಇನ್ನು ಈ ಚಿತ್ರಕ್ಕೆ ಭಾರ್ಗವ್ ಟೆಕ್ನಿಷಿಯನ್ ಸೇವೆ ಸಲ್ಲಿಸಿದ್ದು, ಮೂರ್ತಿ ನಿರ್ಮಾಪಕರಾಗಿದ್ದಾರೆ.
ಈ ವಾರ ಚಿತ್ರ ತೆರೆ ಕಾಣಲಿದ್ದು, ಇಂದು ಬಿಡುಗಡೆಗೊಂಡಿರುವ ಟೈಟಲ್ ಟ್ರ್ಯಾಕ್ ರ್‍ಯಾಪ್ ಶೈಲಿಯ ಹಾಡಾಗಿದ್ದು ಚೇತನ್ ಸಂಗೀತಕ್ಕೆ ಜೆಕೆ ಜೀವನ್ ಮತ್ತು ಕೆಜೆ ಕೆವಿನ್ ಕಂಠ ನೀಡಿದ್ದಾರೆ.