Home ಸುದ್ದಿ ರಾಜ್ಯ ನವೆಂಬರ್ 01 ರಂದು ಗರಡಿ: ಟ್ರೇಲರ್ ಅನಾವರಣ ಮಾಡಲಿರುವ ದರ್ಶನ್

ನವೆಂಬರ್ 01 ರಂದು ಗರಡಿ: ಟ್ರೇಲರ್ ಅನಾವರಣ ಮಾಡಲಿರುವ ದರ್ಶನ್

0

ಬೆಂಗಳೂರು: ಕೌರವ ಖ್ಯಾತಿಯ ಬಿ.ಸಿ ಪಾಟೀಲ್ ಅಭಿನಯಿಸಿರುವ ಸಿನಿಮಾದ ಟ್ರೇಲರ್​ ಬಿಡುಗಡೆಯನ್ನು ನಟ ದರ್ಶನ್ ಅನಾವರಣಗೊಳಿಸಲಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ ಟ್ರೇಲರ್​ ಬಿಡುಗಡೆಯ ಆಹ್ವಾನದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ರಾಣೆಬೆನ್ನೂರಿನ ನಗರಸಭೆ ಕ್ರೀಡಾಂಗನದಲ್ಲಿ ನ.೧ರಂದು ಸಂಜೆ 6 ಗಂಟೆಗೆ ಕರ್ನಾಟಕ ರಾಜ್ಯೋತ್ಸವದಂದು ಬಿಡುಗಡೆ ಕಾರ್ಯಕ್ರಮ ಆಯೋಜಿಸಿದೆ ಎಂದಿದ್ದಾರೆ ಟ್ರೇಲರ್‌ನ್ನು ಸ್ಯಾಂಡಲ್‌ವುಡ್‌ ನಟ ದರ್ಶನ್‌ ತೂಗುದೀಪ ಅನಾವರಣಗೊಳಿಸಲಿದ್ದಾರೆ.
ಸೌಮ್ಯ ಫಿಲ್ಮ್ಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ಈ ಚಿತ್ರವನ್ನು ನಿರ್ಮಿಸಿದ್ದು, ಸೃಷ್ಟಿ ಪಾಟೀಲ್ ಕಾರ್ಯಕಾರಿ ನಿರ್ಮಾಪಕಿ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸುಮಧುರ ಸಂಗೀತ, ನಿರಂಜನ್ ಬಾಬು ಅವರ ಛಾಯಾಗ್ರಹಣ, ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನವಿದೆ. ಕನ್ನಡ ರಾಜ್ಯೋತ್ಸವದಂದು ಗರಡಿ ಚಿತ್ರದ ಟ್ರೇಲರ್​ ಬಿಡುಗಡೆ ಆಗಲಿದ್ದು, ಬೆರಳೆಣಿಕೆ ದಿನಗಳ ಅಂತರದಲ್ಲಿ ಅಂದರೆ ನವೆಂಬರ್ 10ರಂದು ‘ಗರಡಿ’ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Exit mobile version