Home ತಾಜಾ ಸುದ್ದಿ ನಮಾಜಿಗಳಿಗೆ ಒದೆ: ಕಾಂಗ್ರೆಸ್ ಖಂಡನೆ

ನಮಾಜಿಗಳಿಗೆ ಒದೆ: ಕಾಂಗ್ರೆಸ್ ಖಂಡನೆ

0

ನವದೆಹಲಿ: ನಮಾಜ್ ಮಾಡಲು ಬಗ್ಗಿದ್ದಾಗ ಇನ್‌ಸ್ಪೆಕ್ಟರ್ ಒದೆಯುತ್ತಿರುವುದು ವೈರಲ್ ಆಗಿರುವ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿದೆ. ಒಬ್ಬಾತನ ತಲೆಗೂ ಎಸ್‌ಐ ಗುದ್ದಿರುವುದು ದಾಖಲಾಗಿದೆ. ಆನಂತರ ಸ್ಥಳೀಯರು ಬಂದು ಸಬ್ ಇನ್‌ಸ್ಪೆಕ್ಟರ್ ಅವರನ್ನು ತಡೆದಿದ್ದಾರೆ.
ಪೊಲೀಸ್ ಅಧಿಕಾರಿ ದರ್ಪವನ್ನು ಖಂಡಿಸಿ ಜನ ದಿಡೀರ್ ಪ್ರತಿಭಟನೆ ನಡೆಸಿದರು. ಡಿಸಿಪಿ ಮೀನಾ ಪ್ರತಿಭಟನಾಕಾರರನ್ನು ಭೇಟಿ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ ಸಬ್‌ಇನ್‌ಸ್ಪೆಕ್ಟರ್ ಅವರನ್ನು ಕೂಡಲೇ ಅಮಾನತು ಮಾಡಿದರು. ಆನಂತರ ಅವರು ಪ್ರತಿಭಟನೆಯನ್ನು ನಿಲ್ಲಿಸಿದರು. ಆ ಪ್ರೆದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಹೆಚ್ಚಿನ ಪೊಲೀಸ್ ಪಡೆಯನ್ನು ನೇಮಿಸಲಾಗಿದೆ. ಕಾಂಗ್ರೆಸ್ ಪಕ್ಷ ಕೂಡ ಘಟನೆಯನ್ನು ಖಂಡಿಸಿದೆ.

Exit mobile version