Home ಸುದ್ದಿ ನಗರದಲ್ಲಿ ಪೋಲಿಸ್ ಮತ್ತು ಸೈನಿಕರ ಪಥ ಸಂಚಲನ

ನಗರದಲ್ಲಿ ಪೋಲಿಸ್ ಮತ್ತು ಸೈನಿಕರ ಪಥ ಸಂಚಲನ

0

ಇಳಕಲ್: ನಗರದ ಪ್ರಮುಖ ಬೀದಿಗಳಲ್ಲಿ ಪೋಲಿಸರು ಮತ್ತು ಸೈನಿಕರು ಪಥ ಸಂಚಲನವನ್ನು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆಸಿದರು.
ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ರೀತಿಯ ಗದ್ದಲ ಗೊಂದಲ ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಪೋಲಿಸರು ಡಿಐಆರ್ ಪಡೆಯವರು ಮತ್ತು ಸೈನಿಕರು ಶಿಸ್ತುಬದ್ದವಾಗಿ ಪಥ ಸಂಚಲನ ನಡೆಸಿದಾಗ ಮನೆಯಲ್ಲಿ ಮತ್ತು ಅಂಗಡಿಗಳಲ್ಲಿ ಕುಳಿತ ಜನರು ಗಲಿಬಿಲಿಗೊಂಡರಲ್ಲದೇ ಎಲ್ಲಿ ಏನಾಯಿತು ಎಂದು ಪರಸ್ಪರ ಮಾತನಾಡತೊಡಗಿದರು. ಹುನಗುಂದ ಡಿಎಸ್ ಪಿ ಎಸ್ ವಿ ಗಿರೀಶ್ ಸಿಪಿಐ ಸುರೇಶ ಬಂಡೆಗುಂಬಳ ಪಿಎಸ್ ಐರಾದ ಎಸ್ ಬಿ ಪಾಟೀಲ ಕೃಷ್ಣವೇಣಿ ಮತ್ತಿತರರ ನೇತ್ರತ್ವದಲ್ಲಿ ಪಥ ಸಂಚಲನ ನಡೆಯಿತು.

Exit mobile version