ರಾಯಚೂರು: ನಕಲಿ ಚಿನ್ನ ಅಡವಿಟ್ಟು ಕೋಂಟ್ಯತರ ರೂ. ವಂಚನೆ ಮಾಡಿದ್ದ ಆರೋಪಿ
ಮಹಾರಾಷ್ಟ್ರ ಬ್ಯಾಂಕ್‌ನ ವ್ಯವಸ್ಥಾಪಕ ಕೆ. ನರೇಂದ್ರರೆಡ್ಡಿಯನ್ನು ಶ್ರೀಶೈಲದಲ್ಲಿ
ಜಿಲ್ಲಾ ಸೈಬರ್ ಅಪರಾಧ ಠಾಣೆಯ ಪೊಲೀಸರು ಬಂಧಿಸದ್ದಾರೆ.
ಬ್ಯಾಂಕ್ ವ್ಯವಸ್ಥಾಪಕ ಕೆ.ನರೇಂದ್ರರೆಡ್ಡಿ ಗ್ರಾಹಕರ ದಾಖಲೆಗಳನ್ನು ಬಳಸಿಕೊಂಡು ನಕಲಿ
ಖಾತೆಗಳನ್ನು ಸೃಷ್ಟಿಸಿ ಚಿನ್ನದ ಸಾಲದ ಮೇಲೆ 10.97 ಕೋಟಿ ರು. ವಂಚಿಸಿದ್ದ. ಲೆಕ್ಕ
ಪರಿಶೋಧನೆ ಸಂದರ್ಭದಲ್ಲ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಆರೋಪಿ
ಪರಾರಿಯಾಗಿದ್ದ. ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರ ಸುಚೇತ ಅವರ ನೀಡಿದ್ದ ದೂರಿನ
ಮೇರೆಗೆ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ಬೆನ್ನು ಹತ್ತಿದ್ದ ಪೊಲೀಸರು ಶ್ರೀಶೈಲಂನಲ್ಲಿ ಆರೋಪಿಯನ್ನು ಪತ್ತೆ
ಹಚ್ಚಿದ್ದಾರೆ. ಮಹಿಳೆಯೊಂದಿಗೆ ಇದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. 97 ಲಕ್ಷ
ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯ ಬಂಧನಕ್ಕೆ
ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ
ತಿಳಿಸಿದ್ದಾರೆ.