Home ತಾಜಾ ಸುದ್ದಿ ದೇಶ ಒಡೆಯುವ ಕೆಲಸವನ್ನು ಆರ್ ಎಸ್ ಎಸ್ ಮಾಡುತ್ತಿದೆ : ಕಾಶಪ್ಪನವರ ಆರೋಪ

ದೇಶ ಒಡೆಯುವ ಕೆಲಸವನ್ನು ಆರ್ ಎಸ್ ಎಸ್ ಮಾಡುತ್ತಿದೆ : ಕಾಶಪ್ಪನವರ ಆರೋಪ

0


ಇಳಕಲ್ : ಧರ್ಮ ಧರ್ಮಗಳ ಹೆಸರಿನಲ್ಲಿ ಜಾತ್ಯಾತೀತ ದೇಶವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಡೆಯಲು ಪ್ರಯತ್ನಿಸುತ್ತಿದೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ನೇರವಾಗಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದಾದರೂ ಚುನಾವಣೆ ಬಂತು ಎಂದರೆ ದೇಶದಲ್ಲಿ ಅವಘಡ ಸೃಷ್ಟಿಸಿ ಧರ್ಮ ಧರ್ಮಗಳ ಜನರಲ್ಲಿ ದ್ವೇಷ ಭಾವನೆಗಳನ್ನು ಮೂಡಿಸುವ ಕುತಂತ್ರವನ್ನು ಅದು ಮಾಡುತ್ತಿದೆ ಆದರೆ ಭಾರತೀಯರು ಶಾಂತಿ ಪ್ರಿಯರು ಇಂತಹ ಯಾವುದೇ ಕುತಂತ್ರಕ್ಕೆ ಅವರು ಬಲಿಯಾಗುವದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವಾಭಿಮಾನಿಯಾಗಿದ್ದು ಅದಕ್ಕಾಗಿ ಎರಡು ದಿನಗಳನ್ನು ಕೂಡಲಸಂಗಮದ ಬಸವಾದಿ ಶರಣರ ವೈಭವ ಕಾರ್ಯಕ್ರಮದಲ್ಲಿ ಕಳೆಯುತ್ತಿದ್ದು ಅಲ್ಲಿ ಆರ್ ಎಸ್ ಎಸ್ ದವರಿಗೆ ತಕ್ಕ ಉತ್ತರ ಕೋಡೋಣ ಎಂದು ಹೇಳಿದರು.

Exit mobile version