ಇಳಕಲ್ : ತಾಲೂಕಿನ ಗೊರಬಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ಕೃಷ್ಣ ರಾಠೋಡ ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್ ಕೊಡುವ ಐಕಾನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಕರ್ನಾಟಕ ಪಂಚಾಯತಿ ಇಲಾಖೆಯ ವಿಭಾಗದಲ್ಲಿ ಸಾಧನೆ ಮಾಡಿದ ಶಾರದಾ ಅವರನ್ನು ಗುರುತಿಸಿದ ಪ್ರೆಸ್ ಕ್ಲಬ್ ಗುರುವಾರದಂದು ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರು ವಿತರಿಸಿದರು.
ಶಾರದಾ ರಾಠೋಡ ಗೊರಬಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಮಯದಲ್ಲಿಯೂ ತಾವು ಮಾಡುತ್ತಿದ್ದ ಹಣ್ಣುಗಳ ವ್ಯಾಪಾರ ಮುಂದುವರೆಸಿಕೊಂಡು ಹೋಗುತ್ತಿರುವ ಬಗ್ಗೆ ಸಚಿತ್ರ ಲೇಖನವನ್ನು ಸಂಯುಕ್ತ ಕರ್ನಾಟಕದ ಸಿಂಧೂರ ವಿಭಾಗದಲ್ಲಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.