ಬೆಂಗಳೂರು: ಡಿಸೆಂಬರ್ 16ರನ್ನು ‘ವಿಜಯ ದಿವಸ್’ ಎಂದು ಆಚರಿಸಲಾಗುತ್ತದೆ. ವಿಜಯ ದಿವಸದಂದು ರಕ್ಷಣಾ ಪಡೆಗಳ ತ್ಯಾಗವನ್ನು ನೆನಪಿಸಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ.
1971ರ ಡಿಸೆಂಬರ್ 16ರಂದು ಪಾಕಿಸ್ತಾನದ ಸೇನಾಪಡೆಗಳು ಭಾರತದ ಸೇನಾಪಡೆಗಳಿಗೆ ತನ್ನ ಶರಣಾಗತಿಯನ್ನು ಘೋಷಿಸಿದ್ದವು. ಪಾಕಿಸ್ತಾನದ ಸೇನಾಪಡೆಗಳ ಮುಖ್ಯಸ್ಥ ಜನರಲ್ ಎ.ಎ.ಖಾನ್ ನಿಯಾಜಿ ಅವರು ತಮ್ಮ 93 ಸಾವಿರ ಯೋಧರೊಂದಿಗೆ ಬೇಷರತ್ತಾಗಿ ಭಾರತದ ಸೇನೆ ಮತ್ತು ಮುಕ್ತಿ ಬಹಿನಿ ಒಳಗೊಂಡ ಮೈತ್ರಿಕೂಟ ಪಡೆಗಳಿಗೆ ಶರಣಾಗತಿ ಘೋಷಿಸಿದ್ದರು. ಈ ಯುದ್ದದ ಅಂತ್ಯದಲ್ಲಿ ಪೂರ್ವ ಪಾಕಿಸ್ತಾನ, ಬಾಂಗ್ಲಾ ದೇಶದೊಂದಿಗೆ ಸೇರ್ಪಡೆಗೊಂಡು ಹೊಸ ಬಾಂಗ್ಲಾ ದೇಶದ ಉದಯಕ್ಕೆ ನಾಂದಿಯಾಯಿತು. ವಿಜಯ್ ದಿವಸದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೀರ ಯೋಧರ ತ್ಯಾಗ, ಬಲಿದಾನಗಳನ್ನು ಸ್ಮರಿಸಿದ್ದಾರೆ.