Home ಸುದ್ದಿ ದೇಶ ದೆಹಲಿ ಅಭಿವೃದ್ಧಿಗೆ ಪ್ರಧಾನಿ ಆಶೀರ್ವಾದ ಬೇಕು: ಕೇಜ್ರಿವಾಲ್

ದೆಹಲಿ ಅಭಿವೃದ್ಧಿಗೆ ಪ್ರಧಾನಿ ಆಶೀರ್ವಾದ ಬೇಕು: ಕೇಜ್ರಿವಾಲ್

0
ಕೇಜ್ರಿವಾಲ್

ನವದೆಹಲಿ: ದೇಶದ ರಾಜಧಾನಿಯ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಹಕಾರ ಹಾಗೂ ಆಶೀರ್ವಾದ ಬೇಕು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮನವಿ ಮಾಡಿದರು.
ದೆಹಲಿ ಪಾಲಿಕೆಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕರಿಸಿದ ದೆಹಲಿಯ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಾನು ಎಲ್ಲಾ ಅಭ್ಯರ್ಥಿಗಳಿಗೆ ಮತ್ತು ಎಲ್ಲಾ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಇಂದಿನವರೆಗೂ ರಾಜಕೀಯ ಇತ್ತು. ಇನ್ನು ಮುಂದೆ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್, ಆಪ್ ಪಕ್ಷಗಳು ಜೊತೆಗೂಡಿ ಕೆಲಸ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

Exit mobile version