Home ನಮ್ಮ ಜಿಲ್ಲೆ ದಿನೇ ದಿನೇ ಹೆಚ್ಚುತ್ತಿದೆ ಭೂಕಂಪನದ ಆತಂಕ

ದಿನೇ ದಿನೇ ಹೆಚ್ಚುತ್ತಿದೆ ಭೂಕಂಪನದ ಆತಂಕ

0

ವಿಜಯಪುರ ಜಿಲ್ಲೆಯಲ್ಲಿ ಭೂಕಂಪನದ ಆತಂಕ ದಿನೇ ದಿನೇ ಹೆಚ್ಚುತ್ತಿದೆ. ಒಂದೇ ದಿನದಲ್ಲಿ ಹಲವಾರು ಬಾರಿ ಭೂಮಿ ಕಂಪಿಸುತ್ತಿದ್ದು ಜನತೆ ಭೂಕಂಪನದ ಗುಂಗಿನಲ್ಲಿಯೇ ನಿದ್ರೆ ಮಾಡುವಂತಾಗಿದೆ. ಅನೇಕರು ರಾತ್ರಿ ಜಾಗರಣೆ ಮಾಡುತ್ತಿದ್ದಾರೆ.
ಸೋಮವಾರ ಒಂದೇ ದಿನ ಮೂರು ಬಾರಿ ಭೂಮಿ ಕಂಪಿಸಿದ್ದು, ಜನರು ಆತಂಕಗೊಂಡಿದ್ದಾರೆ. ಸಂಜೆ 4:26, ರಾತ್ರಿ 9.22 ಮತ್ತು 11.04ರ ಸುಮಾರಿಗೆ ಭೂಮಿ ನಡುಗಿರುವ ಅನುಭವವಾಗಿದೆ. ರೈಲ್ವೆ ನಿಲ್ದಾಣ, ಗೋಳಗುಮ್ಮಟ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭೂಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿದೆ.

ಭೂಕಂಪನ

Exit mobile version