Home ತಾಜಾ ಸುದ್ದಿ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದವರು…

ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದವರು…

0

ಸುಳ್ಳು, ಅಪಪ್ರಚಾರದ ಆಧಾರದ ಮೇಲೆ ಚುನಾವಣೆ ಗೆದ್ದು, ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದೀರಲ್ಲ,

ಬೆಂಗಳೂರು: ಯಾವುದೇ ಸಾಕ್ಷಿ, ಪುರಾವೆ, ಆಧಾರವಿಲ್ಲದೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ತೇಜೋವಧೆ ಮಾಡಿ ಮತದಾರರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್​ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಇಂದಿನ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದ 40% ಕಮಿಷನ್‌: ತನಿಖಾ ಆಯೋಗಕ್ಕೂ ಸಿಗುತ್ತಿಲ್ಲ ಸಾಕ್ಷ್ಯ ಎಂಬ ವರದಿಯನ್ನು ಹಂಚಿಕೊಂಡು ಪೋಸ್ಟ್‌ ಮಾಡಿದ್ದು ಸಿಎಂ ಸಿದ್ದರಾಮಯ್ಯನವರೇ, ಸುಳ್ಳು, ಅಪಪ್ರಚಾರದ ಆಧಾರದ ಮೇಲೆ ಚುನಾವಣೆ ಗೆದ್ದು, ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದೀರಲ್ಲ, ತಮಗೆ ಆತ್ಮಸಾಕ್ಷಿ ಅನ್ನೋದೇ ಇಲ್ಲವೇ? ತಮಗೆ ಎಳ್ಳಷ್ಟಾದರೂ ನೈತಿಕತೆ ಇದ್ದರೆ ಕನ್ನಡಿಗರ ಕ್ಷಮೆ ಕೇಳಿ ರಾಜೀನಾಮೆ ಕೊಡಿ. ವಿಧಾನಸಭೆ ವಿಸರ್ಜನೆ ಮಾಡಿ ಮರುಚುನಾವಣೆ ಎದುರಿಸಿ ಎಂದಿದ್ದಾರೆ.

Exit mobile version