Home ತಾಜಾ ಸುದ್ದಿ ದತ್ತಾತ್ರೇಯ‌ಸ್ವಾಮಿ‌ ಮೂರ್ತಿ ಭಗ್ನ : ಸಾರ್ವಜನಿಕರ ಆಕ್ರೋಶ

ದತ್ತಾತ್ರೇಯ‌ಸ್ವಾಮಿ‌ ಮೂರ್ತಿ ಭಗ್ನ : ಸಾರ್ವಜನಿಕರ ಆಕ್ರೋಶ

0

ಹುಬ್ಬಳ್ಳಿ: ಇಲ್ಲಿನ‌ ದೇಶಪಾಂಡೆನಗರದ ಅಪರ್ಣಾ ಅಪಾರ್ಟಮೆಂಟ್ ಬಳಿ‌ ಇರುವ ದೇವಸ್ಥಾನದಲ್ಲಿ ದತ್ತಾತ್ರೇಯ ಸ್ವಾಮಿ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ತಡರಾತ್ರಿ ನಡೆದಿದೆ.
ಕಿಡಿಗೇಡಿಗಳು ವಿಕೃತಿ ಮೆರೆದಿದ್ದು, ದೇವರ ಮೂರ್ತಿಯ ನಾಲ್ಕು ಕೈಗಳನ್ನು ಕತ್ತರಿಸಿ ಮೂರ್ತಿ ಭಗ್ನಗೊಳಿಸಿದ್ದಾರೆ.
ದೇಶಪಾಂಡೆ ನಗರದ ಅಪರ್ಣಾ ಅಪಾರ್ಟ್ಮೆಂಟ್ ನಲ್ಲಿರುವ ದೇವಸ್ಥಾನದ ದೇವರ ಮೂರ್ತಿ ಭಗ್ನಗೊಳಿಸಲಾಗಿದೆ. ಸುಮಾರು ೧೫ ವರ್ಷಕ್ಕೂ ಹೆಚ್ಚು ಕಾಲ ಪೂಜೆ ಮಾಡಿಕೊಂಡು ಬರಲಾಗಿದೆ. ಕಳೆದ ರಾತ್ರಿ ದಾಂಡಿಯಾ ನೃತ್ಯ ಮಾಡೊದಾಗ ಮೂರ್ತಿಗೆ ಏನು ಆಗಿರಲಿಲ್ಲ. ಆದರೆ ಬೆಳಗ್ಗೆ ನಾಲ್ಕು ಕೈ ಕತ್ತರಿಸಿರುವ ಘಟನೆ ನಡೆದಿದ್ದು, ಭಕ್ತರ ಮನಸ್ಸಿಗೆ ಆಘಾತವುಂಟು ಮಾಡಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version