Home News ತೀನ್ ಬಚ್ಚೆ, ಹಿಂದೂ ಸಚ್ಚೆ: ಬಾಕಿ ಸಬ್ ಕಚ್ಚೆ: ತೊಗಾಡಿಯಾ

ತೀನ್ ಬಚ್ಚೆ, ಹಿಂದೂ ಸಚ್ಚೆ: ಬಾಕಿ ಸಬ್ ಕಚ್ಚೆ: ತೊಗಾಡಿಯಾ

ಹುಬ್ಬಳ್ಳಿ: ಹಿಂದುಗಳ ಸುರಕ್ಷತೆ ನಮ್ಮ ಮುಖ್ಯ ಧ್ಯೇಯವಾಗಿದ್ದು, ದೆಶದಲ್ಲಿ ಹಿಂದುಗಳ ಜನಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಹಿಂದು ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದುಗಳು ಮೂರು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಅಂತಾರಾಷ್ಟ್ರೀಯ ಹಿಂದು ಪರಿಷತ್ ಸಂಸ್ಥಾಪಕ ಡಾ. ಪ್ರವೀಣಭಾಯಿ ತೊಗಾಡಿಯಾ ಕರೆ ನೀಡಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀನ್ ಬಚ್ಚೆ, ಹಿಂದೂ ಸಚ್ಚೆ: ಬಾಕಿ ಸಬ್ ಕಚ್ಚೆ. ಪ್ರತಿ ಹಿಂದೂ ದಂಪತಿ ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಮೂರನೇ ಮಗುವಿನ ಶೈಕ್ಷಣಿಕ ಜವಾಬ್ದಾರಿ ನಮ್ಮದಾಗಿದ್ದು, ಅಂತಹ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ದೇಶದಲ್ಲಿ ಯಾವ ಹಿಂದುವೂ ಹಸಿವೆನಿಂದ ಮಲಗಬಾರದು. ಇದಕ್ಕಾಗಿ ಪರಿಷತ್ ಮುಷ್ಠಿ ಅಕ್ಕಿ ಯೋಜನೆ ಜಾರಿಗೆ ತಂದಿದೆ. ಪ್ರತಿಯೊಬ್ಬ ಹಿಂದು ಪ್ರತಿನಿತ್ಯ ಮುಷ್ಠಿ ಅಕ್ಕಿ ತೆಗೆದಿಟ್ಟು, ಅಡುಗೆ ಮಾಡಬೇಕು. ಹೀಗೆ ತೆಗೆದಿರಿಸಿದ ಅಕ್ಕಿಯನ್ನು ಪ್ರತಿ ತಿಂಗಳಿಗೊಮ್ಮೆ ಬಡ ಹಿಂದುಗಳಿಗೆ ಹಂಚಬೇಕು. ಇದರಿಂದ ಯಾವ ಹಿಂದೂ ಹಿಸವೆಯಿಂದ ಬಳಲಲಾರ. ರಾಮ ಮಂದಿರ ನಿರ್ಮಾಣದ ಸಂಕಲ್ಪದೊಂದಿಗೆ ೧೯೮೪ ರಿಂದ ನಾನು ಹೋರಾಟಕ್ಕೆ ಇಳಿದಿದ್ದು, ಅದು ಪೂರ್ಣವಾಗಿದೆ. ಅದರೊಂದಿಗೆ ಹಿಂದುಗಳ ಸುರಕ್ಷತೆಯ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

Exit mobile version