Home News ತಾಯಿ ನಿಧನವಾದರೂ ಪರೀಕ್ಷೆ ಬರೆದ ವಿದ್ಯಾರ್ಥಿ

ತಾಯಿ ನಿಧನವಾದರೂ ಪರೀಕ್ಷೆ ಬರೆದ ವಿದ್ಯಾರ್ಥಿ

ಕೊಪ್ಪಳ: ತಾಯಿಯ ನಿಧನವಾದರೂ ನೋವಿನಲ್ಲಿರುವ ವಿದ್ಯಾರ್ಥಿಯೋರ್ವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಘಟನೆ ಗಂಗಾವತಿ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಕೇಸರಹಟ್ಟಿ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಡಿವಯ್ಯಸ್ವಾಮಿ ತಾಯಿ ಸಾವಿನಲ್ಲೂ ಪರೀಕ್ಷೆ ಬರೆದಿದ್ದಾನೆ.
ತಾಯಿ ವಿಜಯಲಕ್ಷ್ಮೀ ಕೆಲ ದಿನಗಳ ಹಿಂದೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಹುಬ್ಬಳ್ಳಿಯ ಆಸ್ಪತ್ರೆಯೊಂದರಲ್ಲಿ ಗುರುವಾರ ಶಸ್ತ್ರಚಿಕಿತ್ಸೆ ನಡೆದರೂ ಫಲಿಸದೇ ವಿಜಯಲಕ್ಷ್ಮೀ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಹುಬ್ಬಳ್ಳಿಯಿಂದ ತಾಯಿಯ ಮೃತದೇಹ ಬರುವುದು ತಡವಿದ್ದ ಕಾರಣ ಪಾಲಕರು, ಶಿಕ್ಷಕರು ಧೈರ್ಯದಿಂದಾಗಿ ವಿದ್ಯಾರ್ಥಿ ಅಡಿವಯ್ಯಸ್ವಾಮಿಯ ದುಃಖದಲ್ಲೇ ಪರೀಕ್ಷೆಗೆ ಹಾಜರಾಗಿದ್ದಾನೆ.
ಸಂಜೆ ಬಳಿಕ ಬಾಲಕ ತಾಯಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾನೆ.

Exit mobile version