Home News ತಲೆ ಮೇಲೆ ಕಲ್ಲು ಹೊತ್ತು ವಿಜಯಪುರಕ್ಕೆ ಪಾದಯಾತ್ರೆ

ತಲೆ ಮೇಲೆ ಕಲ್ಲು ಹೊತ್ತು ವಿಜಯಪುರಕ್ಕೆ ಪಾದಯಾತ್ರೆ

ತಾಳಿಕೋಟಿ ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ತಲೆ ಮೇಲೆ ಕಲ್ಲು ಹೊತ್ತು ನಡೆಸುತ್ತಿರುವ ಪಾದಯಾತ್ರೆ ವಿಜಯಪುರಕ್ಕೆ ತಲುಪಿತು.

ವಿಜಯಪುರ: ತಾಳಿಕೋಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಹಡಗಿನಾಳ, ಮೂಕಿಹಾಳ, ಕಲ್ಲದೇವನಹಳ್ಳಿ, ಹರನಾಳ, ನಾಗೂರ ಮುಂತಾದ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೇಲ್ಮಟ್ಟದ ಸೇತುವೆಗೆ ಬಸ್ ನಿಲ್ದಾಣದವರೆಗೆ ನೇರ ರಸ್ತೆ ಕಲ್ಪಿಸುವುದು ಹಾಗೂ ತಾಳಿಕೋಟಿ ಪುರಸಭೆಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರದ ತನಿಖೆಗಾಗಿ ತಾಳಿಕೋಟಿ ಅಭಿವೃದ್ಧಿ ಸಮಿತಿ ವತಿಯಿಂದ ತಾಳಿಕೋಟೆಯಿಂದ ನಡೆದಿರುವ ಪಾದಯಾತ್ರೆ ವಿಜಯಪುರಕ್ಕೆ ತಲುಪಿತು.
ತಲೆ ಮೇಲೆ ಕಲ್ಲು ಹೊತ್ತ ಪದಾಧಿಕಾರಿಗಳು ದಿನಾಂಕ 5ರಂದು ತಾಳಿಕೋಟೆಯಿಂದ ವಿಜಯಪುರಕ್ಕೆ ಪಾದಯಾತ್ರೆಗೆ ಅಣಿಯಾಗಿದ್ದರು. ದಾರಿಯುದ್ದಕ್ಕೂ ತಲೆಯ ಮೇಲೆ ಕಲ್ಲು ಹೊತ್ತು ಅವ್ಯವಹಾರ ತನಿಖೆಗೆ ಘೋಷಣೆ ಕೂಗುತ್ತಾ ಸಾಗಿದರು. ವಿಜಯಪುರಕ್ಕೆ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸುರೇಶ ನಾಡಗೌಡ, ಚಿನ್ನು ನಾಡಗೌಡ, ನಿಂಗನಗೌಡ ಅಸ್ಕಿ, ಸಂಗಮೇಶ ಛಾಯಾಗೋಳ, ಮಹಿಬೂಬ ಚೋರಗಸ್ತಿ, ಪ್ರಭುಗೌಡ ಮದರಕಲ್, ಆರಿಫ್ ಹೊನ್ನುಟಗಿ, ಜಗದೀಶ ಡೇರೆದ, ಕಾಸಿಮ್ ಪಟೇಲ್, ಸುರೇಶ ಹಜೇರಿ, ಅಕ್ಕಮಹಾದೇವಿ ಕಟ್ಟಿಮನಿ, ಸತ್ತಾರ ಅವಟಿ, ಮೋದಿನ್ ನಗಾರ್ಚಿ, ಮುನ್ನಾ ಅರ್ಜುಣಗಿ, ಆನಂದ ಗುರಡ್ಡಿ ಪಾಲ್ಗೊಂಡಿದ್ದರು.

ಪಾದಯಾತ್ರೆ
ತಾಳಿಕೋಟಿ ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ತಲೆ ಮೇಲೆ ಕಲ್ಲು ಹೊತ್ತು ನಡೆಸುತ್ತಿರುವ ಪಾದಯಾತ್ರೆ ವಿಜಯಪುರಕ್ಕೆ ತಲುಪಿತು.
Exit mobile version