Home ಅಪರಾಧ ತಂದೆಯ ಬೀಡಿ ಚಟಕ್ಕೆ ಮಗು ಬಲಿ

ತಂದೆಯ ಬೀಡಿ ಚಟಕ್ಕೆ ಮಗು ಬಲಿ

0

ಮಂಗಳೂರು: ಮನೆಯಲ್ಲಿ ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ ಹತ್ತು ತಿಂಗಳ ಮಗವೊಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಹೊರವಲಯದ ಅಡ್ಯಾರ್ನಲ್ಲಿ ಮನೆಯಲ್ಲಿ ತಂದೆ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ 10 ತಿಂಗಳ ಮಗು ಮೃತಪಟ್ಟಿದೆ. ಅಡ್ಯಾರ್ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ ಮಗು ಅನೀಶ್ ಕುಮಾರ್ ಮೃತ ಮಗು, ತನ್ನ ಗಂಡನ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ. ಮನೆಯೊಳಗೆ ಬೀಡಿ ಸೇದಿ ಬಿಸಾಡದಂತೆ ಗಂಡನಿಗೆ ಹಲವು ಬಾರಿ ಎಚ್ಚರಿಸಿದ್ದರೂ ಮತ್ತೆ ಎಸೆದ ಪರಿಣಾಮ ಮಗು ಪ್ರಾಣ ಕಳೆದುಕೊಂಡಿದೆ ಎಂದು ಮಗುವಿನ ತಾಯಿ ಲಕ್ಷ್ಮಿ ದೇವಿ ದೂರು ನೀಡಿದ್ದಾರೆ.

Exit mobile version