Home ಅಪರಾಧ ತಂದೆಯಿಂದಲೇ ಮಗನ ಕೊಲೆ

ತಂದೆಯಿಂದಲೇ ಮಗನ ಕೊಲೆ

0

ಬೀಳಗಿ: ಹಾಲಿಗಾಗಿ ನಡೆದ ಜಗಳ ಹಾಲಾಹಲವನ್ನೇ ಎಬ್ಬಿಸಿದ ಕಥೆಯಿದು. ಪುತ್ರನಿಗೆ ಊಟದಲ್ಲಿ ಹಾಲು ಹಾಕಿಕೊಳ್ಳಬೇಡ ಎಂದಿದ್ದಕ್ಕೆ ಮಾತಿಗೆ ಮಾತು ಬೆಳೆದು, ತಂದೆಯೇ ಮಗನನ್ನು ಕೊಂದ ಘಟನೆ ಬೀಳಗಿ ತಾಲೂಕಿನ ಬಿಸನಾಳದಲ್ಲಿ ನಡೆದಿದೆ.
ಕರಿಯಪ್ಪ ಬೀಳಗಿ(೨೧) ಕೊಲೆಯಾದ ದುರ್ದೈವಿ. ಊಟಕ್ಕೆ ಕುಳಿತಾಗ ಹಾಲು ಹಾಕಿಕೊಳ್ಳಬೇಡ ಎಂದು ತಂದೆ ಡೊಂಗ್ರಪ್ಪ ಹೇಳಿದ್ದು, ತಂದೆ ಮಗನ ಮಧ್ಯೆ ಜಗಳವಾಗಿದೆ. ನಂತರ ಕುಡಿದ ಮತ್ತಿನಲ್ಲಿ ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಡೊಂಗ್ರಪ್ಪ ಪೊಲೀಸರ ಅತಿಥಿಯಾಗಿದ್ದಾನೆ. ಕರಿಯಪ್ಪ ಕೆಲಸದಲ್ಲಿ ಸಹಾಯ ಮಾಡುತ್ತಿರಲಿಲ್ಲ, ಹೀಗಾಗಿ ಅಪ್ಪ-ಮಗನ ನಡುವೆ ಆಗಾಗ ಗಲಾಟೆ ಆಗುತ್ತಿತ್ತು ಎಂದು ಹೇಳಲಾಗಿದೆ.
ತನ್ನ ಪತಿ ಡೊಂಗ್ರಪ್ಪನೇ ಪುತ್ರನನ್ನು ಹತ್ಯೆ ಮಾಡಿದ್ದಾನೆ ಎಂದು ಮೃತನ ತಾಯಿ ಹನಮವ್ವ ಬೀಳಗಿ ದೂರು ನೀಡಿದ್ದಾಳೆ. ಮಗನನ್ನು ಕಳೆದುಕೊಂಡ ಮೃತನ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಬೀಳಗಿ ಸಿಪಿಐ ಬಸವರಾಜ ಹಳಬನ್ನವರ ಹಾಗೂ ಪಿಎಸ್‌ಐ ಅಭಿಷೇಕ ನಾಡಗೌಡ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ.

Exit mobile version