Home ತಾಜಾ ಸುದ್ದಿ ಜೋಶಿ ಅವರತ್ತ ಬೊಟ್ಟು ಮಾಡಿದ ಸಿದ್ದರಾಮಯ್ಯ..

ಜೋಶಿ ಅವರತ್ತ ಬೊಟ್ಟು ಮಾಡಿದ ಸಿದ್ದರಾಮಯ್ಯ..

0
SIDDU JI

ಹುಬ್ಬಳ್ಳಿ: ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಮಾನ ನಿಲ್ದಾಣದಲ್ಲಿ ರೈತ ಮುಖಂಡರು ಮನವಿ ಸಲ್ಲಿಸಿದರು.

ಸಚಿವ ಸಂತೋಷ ಲಾಡ್ ಅವರ ಬಗ್ಗೆ ಪ್ರಸ್ತಾಪಿಸಿದ ಸಿಎಂ, ‘ಒಳ್ಳೆ ಮಿನಿಸ್ಟರ್ ಕೊಟ್ಟಿದ್ದೇವೆ ಇನ್ನೇನು’ ಎಂದು ರೈತರನ್ನು ಪ್ರಶ್ನಿಸಿದರು. ಇದೇ ವೇಳೆ ಬರ ಪರಿಹಾರ ಕಾಮಗಾರಿ ಸೇರಿದಂತೆ ಕಳಸಾ ಬಂಡೂರಿ ಯೋಜನೆಯ ಬಗ್ಗೆ ರೈತ ಮುಖಂಡ ಹೇಮನಗೌಡ ಅವರು ಪ್ರಸ್ತಾಪಿಸಿದಾಗ, ನಗು ನಗುತ್ತಲೇ ಉತ್ತರಿಸಿದ ಸಿಎಂ‌ ಸಿದ್ದರಾಮಯ್ಯ, ‘ಅದನ್ನು ಕೇಂದ್ರ ಸರ್ಕಾರಕ್ಕೆ ಕೇಳಬೇಕ್ರಿ…ನಮ್ಮನ್ನ ಹಿಡ್ಕೊಂಡ್ ಅಲ್ಲಾಡಿದ್ರೆ ಹೆಂಗ್ ರೀ..ಆ ಜೋಶಿ ಅವರನ್ನು ಒಂದ್ ಮಾತೂ ಕೇಳಲ್ಲ ನೀವು…’ ಎಂದು ವಿಮಾನ ನಿಲ್ದಾಣದೊಳಗೆ ತೆರಳಿದರು.

Exit mobile version