Home News ಜಾತ್ರೆಗೆ ಬಂದಿದ್ದ ಬಾಲಕ ನದಿಯಲ್ಲಿ ಮುಳುಗಿ ಸಾವು

ಜಾತ್ರೆಗೆ ಬಂದಿದ್ದ ಬಾಲಕ ನದಿಯಲ್ಲಿ ಮುಳುಗಿ ಸಾವು

ಹಾವೇರಿ(ಹೊಳಲು): ಕುಟುಂಬಸ್ಥರೊಂದಿಗೆ ಜಾತ್ರೆಗೆ ಬಂದಿದ್ದ ಬಾಲಕ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಹೂವಿನಹಡಗಲಿ ತಾಲೂಕು ಕುರುವತ್ತಿ ಜಾತ್ರೆಯಲ್ಲಿ ಸಂಭವಿಸಿದೆ.
ಮೃತ ಬಾಲಕ ಬ್ಯಾಡಗಿ ತಾಲೂಕು ಬೀಸಲಹಳ್ಳಿ ಗ್ರಾಮದ ೧೩ ವರ್ಷದ ಮನು ಮುಚ್ಚಟ್ಟಿ ಎಂದು ತಿಳಿದು ಬಂದಿದೆ.
ಜಾತ್ರೆಗೆ ಬಂದಿದ್ದ ಬಾಲಕ ನದಿಯ ಆಚೆಗೆ ಚಿಕ್ಕಕುರುವತ್ತಿ ಭಾಗದಲ್ಲಿ ಸಂಬಂಧಿಕರ ಜೊತೆ ನದಿಗೆ ಸ್ನಾನ ಮಾಡಲು ಬಂದಿದ್ದ. ಈ ವೇಳೆ ಬೋಟಿನ ಗುಂಡಿಗೆ ಸಿಲುಕಿದ ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದ ಹಾಗೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಅಪಾಯವಿರುವ ಬಗ್ಗೆ ತಾಲೂಕು ಆಡಳಿತ ನಾಮಫಲಕ ಹಾಕಬೇಕಿತ್ತು. ಅಧಿಕಾರಿಗಳ ನಿರ್ಲಕ್ಷದಿಂದ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ಹಿಡಿಶಾಪ ಹಾಕಿದರು.

Exit mobile version