ಕಟಾಕಟ್.. ಕಟಾಕಟ್ ಅಂತಾ ಬ್ಯಾಂಕ್ ಅಕೌಂಟ್‌ಗೆ ಪ್ರತಿ ತಿಂಗಳು ಹಣ
ಬೆಂಗಳೂರು: ಅಕ್ಕಿಯ ಬದಲು ನೀಡುತ್ತಿದ್ದ ಹಣ, ಗೃಹಲಕ್ಷ್ಮಿಯ ಹಣವನ್ನು ನೀಡದೆ ರಾಜ್ಯದ ಜನರಿಗೆ ಸಿದ್ದರಾಮಯ್ಯನವರ ಸರ್ಕಾರ ಮೋಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹತ್ತು ಕೆಜಿ.. ಹತ್ತು ಕೆಜಿ ಅಕ್ಕಿ ಫ್ರೀ.. ಕಟಾಕಟ್.. ಕಟಾಕಟ್ ಅಂತಾ ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ಪ್ರತಿ ತಿಂಗಳು ಹಣ ಬಂದು ಬಿದ್ದೇ ಬಿಡುತ್ತೆ.. ಇದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಅಂತಾ ಸುಳ್ಳು ಹೇಳಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಆದರೆ ಇತ್ತ ಅಕ್ಕಿಯ ಬದಲು ನೀಡುತ್ತಿದ್ದ ಹಣ, ಗೃಹಲಕ್ಷ್ಮಿಯ ಹಣವನ್ನು ನೀಡದೆ ರಾಜ್ಯದ ಜನರಿಗೆ ಸಿದ್ದರಾಮಯ್ಯನವರ ಸರ್ಕಾರ ಮೋಸ ಮಾಡುತ್ತಿದೆ. ರಾಜ್ಯದ ಬೊಕ್ಕಸ ಖಾಲಿ ಮಾಡಿ ಜನರಿಗೆ ಬೆಲೆ ಏರಿಕೆಯ ಬರೆಯನ್ನು ದಿನನಿತ್ಯ ಎಳೆಯುತ್ತಾ ಶಾಕ್ ನೀಡುತ್ತಲೇ ಇದೆ.
ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿ ಕೊಡುವ ಬದಲು, ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿ 22.50 ರೂಪಾಯಿಗೆ ಕೊಡುವುದನ್ನು ಖರೀದಿ ಮಾಡಿ, ವಾರ್ಷಿಕ 2280 ಕೋಟಿ ಅಷ್ಟು ಹಣವನ್ನು ಉಳಿತಾಯ ಮಾಡುವಂತೆ ಹಾಗೂ ಎಷ್ಟು ಬೇಕಾದರೂ ಅಕ್ಕಿಯನ್ನು ನೀಡುವುದಾಗಿ ಹೇಳಿದ್ದರೂ ಸಿದ್ದರಾಮಯ್ಯನವರ ಸರ್ಕಾರ ಜಾಣಕುರುಡು ಪ್ರದರ್ಶಿಸುತ್ತಾ ಜನರಿಗೆ ಮೋಸ ಮಾಡುತ್ತಲೇ ಬಂದಿದೆ. ಇದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ಜನರಿಗೆ ಮಾಡುತ್ತಿರುವ ಮೋಸದ ಗ್ಯಾರಂಟಿ. ಸಿಎಂ ನವರೇ ನಿಮಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.