ದಾವಣಗೆರೆ: ಸಮೀಕ್ಷೆಗಳಿಗೆ ಬೆಲೆ ಕೊಡದೆ ಮೂರೂ ಕ್ಷೇತ್ರದ ಜನ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದು ಜನಪರ ಸರ್ಕಾರಕ್ಕೆ ಕೊಟ್ಟ ಮನ್ನಣೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಸುದ್ದಿ ಸಂಸ್ಥೆಗಳು ಉಪಚುನಾವಣೆಯಲ್ಲಿ ಒಂದು ಬಿಜೆಪಿ, ಒಂದು ಕಾಂಗ್ರೆಸ್, ಒಂದು ಜೆಡಿಎಸ್ ಗೆಲುವು ಕಾಣಲಿದೆ ಎಂದು ಸಮೀಕ್ಷೆ ಮಾಡಿದ್ದವು. ಆದರೆ, ಎಲ್ಲವನ್ನೂ ಸುಳ್ಳು ಮಾಡಿದ ಮತದಾರರು ಕಾಂಗ್ರೆಸ್‌ಗೆ ಬಲ ತುಂಬಿದ್ದಾರೆ. ಮೂರೂ ಕಡೆ ಕಾಂಗ್ರೆಸ್ ಗೆಲುವು ಕಂಡಿರುವುದು ಖುಷಿಯ ಸಂಗತಿ ಎಂದರು.