Home ತಾಜಾ ಸುದ್ದಿ ಚುನಾವಣೆ ನಡೆಯದಂತೆ ನೋಡಿಕೊಂಡಿದ್ದು ನಿಮ್ಮ ಸರ್ಕಾರ

ಚುನಾವಣೆ ನಡೆಯದಂತೆ ನೋಡಿಕೊಂಡಿದ್ದು ನಿಮ್ಮ ಸರ್ಕಾರ

0

ಕೇಂದ್ರದ ಮೇಲೆ ಗೂಬೆ ಕೂರಿಸುವ ಚಾಳಿ ಮುಂದುವರಿಸಿದ್ದೀರಿ

ಬೆಂಗಳೂರು: ಕೇಂದ್ರದ ಮೇಲೆ ಗೂಬೆ ಕೂರಿಸುವ ಚಾಳಿ ಮುಂದುವರಿಸಿದ್ದೀರಿ ಎಂದು ಕಾರ್ಕಳ ಶಾಸಕ ಸುನೀಲ ಕುಮಾರ ರಾಜ್ಯ ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ದರ ಏರಿಕೆ ಹಾಗೂ ಪಂಚಾಯಿತ ಚುನಾವಣೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಮಾನ್ಯ ಮುಖ್ಯಮಂತ್ರಿಗಳೇ, ವಿತಂಡವಾದದ ಪರಾಕಾಷ್ಠೆ ಎಂದರೆ ಇದೇ. ಮೆಟ್ರೋ ರೈಲ ದರ‌ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಸಮಿತಿ, ಸಮಿತಿ ಅಧ್ಯಕ್ಷರನ್ನು ನೇಮಕ ಮಾಡುವುದು ಕೇಂದ್ರ ಎಂದು ಹೇಳಿ, ದರ ಏರಿಕೆ ಮಾಡುವಂತೆ ನಿಮ್ಮ ಸರ್ಕಾರ ಕೊಟ್ಟ ಪ್ರಸ್ತಾಪವನ್ನೇ ಮುಚ್ಚಿ ಹಾಕುತ್ತಿದ್ದೀರಿ. ನೀವು ದರ ಹೆಚ್ಚಳಕ್ಕೆ ಪ್ರಸ್ತಾಪ ಸಲ್ಲಿಸದೇ ಇದ್ದರೆ ಈ ಸಮಿತಿ ನಿರ್ಧಾರ ಕೈಗೊಳ್ಳುತ್ತಿತ್ತೇ ? ಶೇ.105 ರಷ್ಟು ಬೆಲೆ ಏರಿಕೆಗೆ ಪ್ರಸ್ತಾಪ ಸಲ್ಲಿಸಿದ ನೀವು ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಚಾಳಿ ಮುಂದುವರಿಸಿದ್ದೀರಿ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯದಂತೆ ನೋಡಿಕೊಂಡಿದ್ದು ನಿಮ್ಮ ಸರ್ಕಾರದ ಪ್ರಜ್ಞಾಪೂರ್ವಕ ನಡೆ.‌ ನ್ಯಾಯಾಲಯದ ಆದೇಶಕ್ಕೂ ಗೌರವ ನೀಡದ ಸರ್ಕಾರ ನಿಮ್ಮದು ಎಂದಿದ್ದಾರೆ.

Exit mobile version