Home News ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು

ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು

ಬೆಂಗಳೂರು: ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಆರಂಭವಾಗುವ ಸೂಚನೆ ಸಿಕ್ಕಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಚಿಕ್ಕಮಗಳೂರಿನಿಂದ ಹಿಂದೂಗಳ ಶ್ರದ್ಧಾಕೇಂದ್ರವಾದ ತಿರುಪತಿಗೆ ನೇರ ರೈಲೊಂದನ್ನು ಹೊರಡಿಸಬೇಕೆಂಬ ಈ ಭಾಗದ ಜನರ ಬೇಡಿಕೆಗೆ ಶಕ್ತಿ ಬರುವ ಸಂಭವವಿದೆ.ಚಿಕ್ಕಮಗಳೂರಿನಿಂದ ಬೆಂಗಳೂರು ಮೂಲಕ ತಿರುಪತಿಗೆ ರೈಲು ಹೊರಡಿಸಬೇಕೆಂದು ಪ್ರಯತ್ನದ ಭಾಗವಾಗಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ. ಸೋಮಣ್ಣರನ್ನು ಭೇಟಿಯಾಗಿದ್ದೆ. ಅಧಿಕಾರಿಗಳೊಂದಿಗೆ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದೆ.ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಆರಂಭವಾಗುವ ಸೂಚನೆ ಸಿಕ್ಕಿದೆ. ಚಿಕ್ಕಮಗಳೂರಿನಿಂದ ಹೊರಡುವ ರೈಲು ಜಿಲ್ಲೆಯ ಹಲವು ನಿಲ್ದಾಣಗಳಲ್ಲಿ ನಿಲುಗಡೆಗೊಳಿಸುವಂತೆ ಕೋರಿದ್ದೇನೆ. ಪ್ರಯತ್ನ ಮುಂದುವರೆಸುತ್ತಾ ಸದ್ಯದಲ್ಲೇ ಮತ್ತೊಮ್ಮೆ ಶುಭಸುದ್ದಿ ನೀಡಲು ಆಸಕ್ತನಾಗಿದ್ದೇನೆ ಎಂದಿದ್ದಾರೆ.

Exit mobile version