Home ಅಪರಾಧ ಗೋವಾದಲ್ಲಿ ಅಪಘಾತ: ರಾಜ್ಯದ ಇಬ್ಬರು ಸಾವು

ಗೋವಾದಲ್ಲಿ ಅಪಘಾತ: ರಾಜ್ಯದ ಇಬ್ಬರು ಸಾವು

0

ಪಣಜಿ: ನಿಂತಿದ್ದ ಟ್ರಕ್‌ಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಗೋವಾದ ಮೋಲೆಮ್‌ನಲ್ಲಿ ನಡೆದಿದೆ.
ಅಪಘಾತದಲ್ಲಿ ಬೈಕ್ ಸವಾರ ರಾಜೇಶ್ ದೇಸಾಯಿ(25) ಸ್ಥಳದಲ್ಲೇ ಸಾವನ್ನಪ್ಪಿದರೆ, ಹಿಂದೆ ಕುಳಿತಿದ್ದ ನಿಖಿಲ್ ಮಂಡಿವಾಲ್ (24) ಅವರನ್ನು ಧಾರಾಬಾದೋಡಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆದಲ್ಲಿಯೇ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು. ಇಬ್ಬರೂ ಮೂಲತಃ ಕರ್ನಾಟಕ ರಾಜ್ಯದವರೆಂದು ತಿಳಿದುಬಂದಿದೆ.

Exit mobile version