Home ಅಪರಾಧ ಗೀಸರ್‌ನಿಂದ ವಿದ್ಯುತ್ ಪ್ರವಹಿಸಿ ಗೃಹಿಣಿ ಸಾವು

ಗೀಸರ್‌ನಿಂದ ವಿದ್ಯುತ್ ಪ್ರವಹಿಸಿ ಗೃಹಿಣಿ ಸಾವು

0

ದಾವಣಗೆರೆ: ಗೀಸರ್‌ನಿಂದ ವಿದ್ಯುತ್ ಪ್ರವಹಿಸಿ ಗೃಹಿಣಿಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಆಂಜನೇಯ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.
ಪಲ್ಲವಿ ಅನಿಲ್ ಮುಂಡಾಸ್ (41) ಮೃತಪಟ್ಟ ಗೃಹಿಣಿ. ಶುಕ್ರವಾರ ಸ್ನಾನಕ್ಕೆಂದು ತೆರಳಿದ್ದಾಗ ಗೀಸರ್ ನಿಂದ ವಿದ್ಯುತ್ ತಗುಲಿ ಗೃಹಿಣಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇವರು ರಾಮ್ ಅಂಡ್ ಕೋ ವೃತ್ತದಲ್ಲಿರುವ ಮೋನಿಕಾ ಗಿಫ್ಟ್ ಶಾಪ್ ಮಾಲೀಕರಾಗಿದ್ದರು. ಮೃತರಿಗೆ ಪತಿ ಅನಿಲ್ ಮುಂಡಾಸ್, ಪುತ್ರಿ ಇದ್ದಾರೆ. ಈ ಘಟನೆ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version