Home News ಗಾಯಕಿ ಅಖಿಲಾ ಪಜಿಮಣ್ಣು ವಿಚ್ಛೇದನಕ್ಕೆ ಅರ್ಜಿ

ಗಾಯಕಿ ಅಖಿಲಾ ಪಜಿಮಣ್ಣು ವಿಚ್ಛೇದನಕ್ಕೆ ಅರ್ಜಿ


ಸಂ.ಕ. ಸಮಾಚಾರ, ಪುತ್ತೂರು: ಗಾಯಕಿ ಅಖಿಲಾ ಪಜಿಮಣ್ಣು ಮತ್ತು ಆಕೆಯ ಪತಿ ಟಿ.ಆರ್. ಧನರಾಜ್ ಶರ್ಮರಿಂದ ವಿವಾಹ ವಿಚ್ಛೇಧನಕ್ಕೆ ಪುತ್ತೂರು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದಾರೆ.
ಇವರಿಬ್ಬರು ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಅಖಿಲಾ ಪಜಿಮಣ್ಣು ಪುತ್ತೂರಿನ ಪಜಿಮಣ್ಣು ಎನ್ನುವ ಗ್ರಾಮದ ನಿವಾಸಿಯಾಗಿದ್ದು, ಅವರ ಪತಿ ಧನರಾಜ್ ಅವರು ಅಮೇರಿಕಾದಲ್ಲಿ ಇಂಜಿನಿಯರ್ ಆಗಿದ್ದು, ಅವರನ್ನು ವಿವಾಹವಾಗಿದ್ದರು.
ಇಬ್ಬರೂ ಪುತ್ತೂರು ನ್ಯಾಯಾಲಯದಲ್ಲಿ ಜೂನ್ ೧೨ ರಂದು ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದು, ಜೂ.೨೦ ರಂದು ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ನಡೆಯಲಿದ್ದು, ಪರಸ್ಪರ ಒಪ್ಪಂದದ ಮೂಲಕ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಇವರಿಬ್ಬರು ಪುತ್ತೂರಿನ ವಕೀಲ ಮಹೇಶ್ ಕಜೆ ಮೂಲಕ ಅರ್ಜಿ ಸಲ್ಲಿಸಿದ್ದರು.

Exit mobile version