Home ನಮ್ಮ ಜಿಲ್ಲೆ ಉಡುಪಿ ಖಾಸಗಿ ಫೈನಾನ್ಸ್ ಮಾಲಕ ಸಾವು

ಖಾಸಗಿ ಫೈನಾನ್ಸ್ ಮಾಲಕ ಸಾವು

0

ಉಡುಪಿ: ನಗರದ ಮಿತ್ರ ಆಸ್ಪತ್ರೆ ಎದುರಿನ ರಸ್ತೆಯಲ್ಲಿನ ಬಲ್ಲಾಳ್ ಫೈನಾನ್ಸ್ ಮಾಲಕ ಮುರಳೀಧರ ಬಲ್ಲಾಳ್ ಗುರುವಾರ ಹೃದಯಾಘಾತದಿಂದ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಅವರು ಕಿನ್ನಿಮೂಲ್ಕಿ ಕನ್ನರ್ಪಾಡಿ ನಿವಾಸಿ. ವಿಪರೀತ ಬೆವರಿ, ಸುಸ್ತು ಎಂದು ಮನೆಯವರಲ್ಲಿ ಹೇಳುತ್ತಿದ್ದಂತೆಯೇ ಕುಸಿದುಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ದೃಢಪಡಿಸಿದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮುರಳೀಧರ ಬಲ್ಲಾಳ್ ಕೊಡುಗೈ ದಾನಿಯಾಗಿದ್ದು, ಕನ್ನರ್ಪಾಡಿ ಶ್ರೀ ಜಯದುರ್ಗಾ ದೇವಳದ ಜೀರ್ಣೋದ್ಧಾರ ಕಾರ್ಯದಲ್ಲಿ ಸಕ್ರಿಯರಾಗಿ ಜನಾನುರಾಗಿಯಾಗಿದ್ದರು. ಅವರ ನಿಧನಕ್ಕೆ ಕಿನ್ನಿಮೂಲ್ಕಿ- ಕನ್ನರ್ಪಾಡಿ ವಲಯ ಬ್ರಾಹ್ಮಣ ಸಭಾ ಸಂತಾಪ ವ್ಯಕ್ತಪಡಿಸಿದೆ.

Exit mobile version