Home ನಮ್ಮ ಜಿಲ್ಲೆ ಖರ್ಗೆ ಅವರು ಸಹ ಕರ್ನಾಟಕಕ್ಕೆ ಸೇರಿದ್ದವರಲ್ಲವೇ?

ಖರ್ಗೆ ಅವರು ಸಹ ಕರ್ನಾಟಕಕ್ಕೆ ಸೇರಿದ್ದವರಲ್ಲವೇ?

0

ಬೆಳಗಾವಿ(ಚಿಕ್ಕೋಡಿ): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಕರ್ನಾಟಕಕ್ಕೆ ಸೇರಿದ್ದವರಲ್ಲವೇ? ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಶ್ನಿಸಿದ್ದಾರೆ.
ಚಿಕ್ಕೋಡಿಯಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೌನ ವಹಿಸಿರುವ ಉದ್ದೇಶ ಏನು ಸ್ಪಷ್ಟಪಡಿಸಬೇಕು. ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರಕಾರವು ಪಿಎಫ್ಐ ಬ್ಯಾನ್ ಮಾಡಿದೆ. ಆದರೆ ಕಾಂಗ್ರೆಸ್ ಸರಕಾರ ಪಿಎಫ್ಐ ಮೇಲಿನ ಕೇಸ್ ವಾಪಸ್ ಪಡೆಯುತ್ತಿದೆ. ಕಾಂಗ್ರೆಸ್ ಮುಖಂಡರಿಗೆ ಭಾರತದ ಮೇಲೆ ಪ್ರೀತಿ ಇದ್ದರೆ ಪಾಕಿಸ್ತಾನ ಜೈ ಎಂದವರ ಮೇಲೆ ಸೂಕ್ತ ಕ್ರಮ ಜರುಗಿಸಲಿ, ಕರ್ನಾಟಕದ ಜನರು ಅರಿತುಕೊಂಡಿರಬಹುದು. ಕರ್ನಾಟಕದಲ್ಲಿ ಏನಾದರೂ ಉಚಿತವಾಗಿ ಲಭ್ಯವಿದ್ದರೆ ಅದು ಭಯೋತ್ಪಾದನೆಯಾಗಿದ್ದು, ಭಯೋತ್ಪಾದಕರಿಗೆ ಪ್ರೋತ್ಸಾಹ ಸಿಗುತ್ತಿದೆ. ನೀವು ಭಾರತದಲ್ಲಿನ ಪಾಕಿಸ್ತಾನದ ಪ್ರತಿನಿಧಿಗಳೇ? ಎಂಬುದುರ ಕುರಿತು ಕರ್ನಾಟಕದ ಜನತೆ ಹಾಗೂ ಇಡೀ ದೇಶವೇ ಉತ್ತರವನ್ನು ಬಯಸುತ್ತಿದೆ ಎಂದರು.

Exit mobile version