Home News ಕ್ರಿಯಾಶೀಲತೆ, ಸೃಜನಶೀಲತೆ ಇದ್ದಾಗ ಮಾತ್ರ ಪರಿಣಾಮಕಾರಿ ಸಾಧನೆ

ಕ್ರಿಯಾಶೀಲತೆ, ಸೃಜನಶೀಲತೆ ಇದ್ದಾಗ ಮಾತ್ರ ಪರಿಣಾಮಕಾರಿ ಸಾಧನೆ

ನರೇಗಾ ಯೋಜನೆ ಬಳಸಿ ಪರಿಣಾಮಕಾರಿ ಕೆಲಸ

ಬೆಂಗಳೂರು: ಯಾವುದೇ ವ್ಯಕ್ತಿಗಾಗಲಿ, ಸಂಸ್ಥೆಗಾಗಲಿ, ಸರ್ಕಾರಕ್ಕಾಗಲಿ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಇದ್ದಾಗ ಮಾತ್ರ ಪರಿಣಾಮಕಾರಿ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಜಿಲ್ಲಾ ಪಂಚಾಯಿತಿಗಳು ಸ್ಥಳೀಯ ಸವಾಲುಗಳು, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡ ಆಸಕ್ತಿದಾಯಕ ವಿಷಯವನ್ನು ನರೇಗಾ ಹಬ್ಬದಲ್ಲಿ ಗಮನಿಸಿದೆ.

ನರೇಗಾ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಬೂದು ನೀರು ನಿರ್ವಹಣೆಯ ಘಟಕ ಸ್ಥಾಪಿಸಿ ನೈಸರ್ಗಿಕ ಸುಸ್ಥಿರತೆಗೆ ಕೊಡುಗೆ ನೀಡಿದ ಕೊಪ್ಪಳ ಜಿಲ್ಲಾ ಪಂಚಾಯತಿಯ ಈ ಕ್ರಿಯಾಶೀಲ ಕೆಲಸಗಳು ಶ್ಲಾಘನೀಯವಾದುದು.

ದಾವಣಗೆರೆ ಜಿಲ್ಲಾ ಪಂಚಾಯಿತಿಯು ಗ್ರಾಮೀಣ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನರೇಗಾ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ,

ಹಾಗೆಯೇ ಬೆಳಗಾವಿ ಜಿಲ್ಲಾ ಪಂಚಾಯಿತಿಯು ನರೇಗಾ ಯೋಜನೆಯನ್ನು ಬಳಸಿ ಮಳೆ ನೀರು ಇಂಗು ಗುಂಡಿಗಳ ಗ್ಯಾಬಿಯನ್ ಸ್ಟ್ರಕ್ಚರ್ ಗಳನ್ನು ನಿರ್ಮಿಸಿ ಮಳೆ ನೀರಿನಿಂದ ಉಂಟಾಗಬಹುದಾದ ಪ್ರವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ ಕೆಲಸಗಳನ್ನು ಮಾಡಿದೆ.

ಈ ಎಲ್ಲಾ ಕ್ರಿಯಾಶೀಲ ಕೆಲಸಗಳು ಇತರರಿಗೂ ಪ್ರೇರಣೆಯಾಗಲಿದೆ, ನರೇಗಾ ಯೋಜನೆಯನ್ನು ಬಳಸಿ ಪರಿಣಾಮಕಾರಿ ಕೆಲಸಗಳನ್ನು ಮಾಡಲು ಸ್ಫೂರ್ತಿ ನೀಡುತ್ತವೆ.

“ಯೋಜನೆ ಒಂದು ಅಭಿವೃದ್ಧಿಯ ಆಯಾಮ ಹಲವು“ ಇದು ನರೇಗಾ ಯೋಜನೆಗೆ ಹೊಂದುವ ಸೂಕ್ತವಾದ ಮಾತು ಎಂದಿದ್ದಾರೆ.

Exit mobile version