Home ನಮ್ಮ ಜಿಲ್ಲೆ ಕೋಲಾರ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿಗೆ ಮೂವರು ಶಾಸಕರು ಸೇರಿ ಆರು ಮಂದಿ ಅವಿರೋಧ ಆಯ್ಕೆ

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿಗೆ ಮೂವರು ಶಾಸಕರು ಸೇರಿ ಆರು ಮಂದಿ ಅವಿರೋಧ ಆಯ್ಕೆ

0

ಸಂ.ಕ. ಸಮಾಚಾರ, ಕೋಲಾರ: ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಮೂವರು ಶಾಸಕರು ಸೇರಿದಂತೆ ಒಟ್ಟು ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇ 28ರಂದು ನಡೆಯುವ ಚುನಾವಣೆ ಗಳಿಗೆ ನಾಮಪತ್ರ ವಾಪಸ್ ಪಡೆಯಲು ಶುಕ್ರವಾರ ಕೊನೆಯ ದಿನವಾಗಿದ್ದು 18 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆಯಿತು ಉಳಿದ 12 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಕೆಜಿಎಫ್  ರೂಪಕಲಾ ಶಶಿಧರ್, ಬಾಗೇಪಲ್ಲಿ ಎನ್.ಎಸ್. ಸುಬ್ಬಾರೆಡ್ಡಿ ಮತ್ತು ಕೋಲಾರದ ಕೊತ್ತೂರು ಮಂಜುನಾಥ್ ಅವಿರೋಧ ಆಯ್ಕೆಯಾದ ಶಾಸಕರು.
ಉಳಿದಂತೆ ಮಾಲೂರು ತಾಲೂಕಿನ ದಿನ್ನಹಳ್ಳಿ ರಮೇಶ್, ಮಂಚೇನಹಳ್ಳಿ ತಾಲೂಕಿನ ಜೆ.ವಿ.ಹನುಮಗೌಡ ಮತ್ತು ಶಿಡ್ಲಘಟ್ಟದ ಎ.ನಾಗರಾಜ್ ಅವಿರೋಧ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸೇರಿದಂತೆ ಇತರರು ಆಯ್ಕೆ ಬಯಸಿ ಕಣದಲ್ಲಿದ್ದಾರೆ.

Exit mobile version