Home ತಾಜಾ ಸುದ್ದಿ ಕೇಸ್‌ಗಳಿಗೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ

ಕೇಸ್‌ಗಳಿಗೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ

0

ಬೆಂಗಳೂರು: ನಿಮ್ಮ ಗುಂಡಾಗಿರಿ, ಬೆದರಿಕೆ ಹಾಗೂ ಕೇಸ್‌ಗಳಿಗೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಅವರು ಭಾರತ್‌ ಜೋಡೋ ನ್ಯಾಯ ಯಾತ್ರೆಯ ಮೇಲೆ ನಡೆದಿರುವ ದಾಳಿ ಖಂಡಿಸಿ ಇಂದು ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾತನಾಡಿ ದೇಶದ ನ್ಯಾಯಕ್ಕಾಗಿ ನಡೆಯುತ್ತಿರುವ ನಮ್ಮ ಯಾತ್ರೆಗೆ ತಡೆಯೊಡ್ಡುವ ಮೂಲಕ ಪ್ರಜಾಪ್ರಭುತ್ವದ ಧ್ವನಿ ಅಡಗಿಸುವ ಪ್ರಯತ್ನಗಳು ನಡೆಯುತ್ತಿರುವುದು ಖಂಡನೀಯ. ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಕೈಗೊಂಡ ಈ ಸಂಕಲ್ಪ, ಕಾಂಗ್ರೆಸ್ ಪಕ್ಷದ ಬದ್ಧತೆಯಾಗಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ನಡೆಸಿದ ದಂಡಿಯಾತ್ರೆ ದೇಶದ ಸ್ವಾತಂತ್ರ್ಯ ಚಳುವಳಿಗೆ ಹೊಸ ದಿಕ್ಕು ನೀಡಿದಂತೆ, ನಮ್ಮ ಈ ಭಾರತ್ ಜೋಡೋ ನ್ಯಾಯ ಯಾತ್ರೆಯೂ ಭಾರತದ ಜನರ ನ್ಯಾಯದ ಹೋರಾಟಕ್ಕೆ ಬಲ ನೀಡಲಿದೆ. ನಮ್ಮ ಈ ಐತಿಹಾಸಿಕ ಯಾತ್ರೆಗೆ ಅಡ್ಡಿಪಡಿಸಿದ ಅಸ್ಸಾಂ ಸರ್ಕಾರ, ಅಲ್ಲಿನ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ನಾನು ಹೇಳುವುದೊಂದೇ ನಿಮ್ಮ ಗುಂಡಾಗಿರಿ, ಬೆದರಿಕೆ ಹಾಗೂ ಕೇಸ್‌ಗಳಿಗೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ. ಅನ್ಯಾಯದ ವಿರುದ್ದ ನಡೆಯುತ್ತಿರುವ ಈ ಯಾತ್ರೆಯು ಯಶಸ್ವಿಯಾಗಿ ನಡೆಯಲಿದೆ.

Exit mobile version