Home ತಾಜಾ ಸುದ್ದಿ ಕೂಗಾಡುವುದನ್ನು ನಿಲ್ಲಿಸು: ಕಾರ್ಪೋರೇಟರ್‌ಗೆ ಕ್ಲಾಸ್ ತಗೆದುಕೊಂಡ ಎಂಎಲ್ಎ

ಕೂಗಾಡುವುದನ್ನು ನಿಲ್ಲಿಸು: ಕಾರ್ಪೋರೇಟರ್‌ಗೆ ಕ್ಲಾಸ್ ತಗೆದುಕೊಂಡ ಎಂಎಲ್ಎ

0

ಬೆಳಗಾವಿ: ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆಗೆ ಚಾಲನೆ ನೀಡಲಾಗಿದೆ. ಆದರೆ ಸಮೀಕ್ಷೆ ವೇಳೆ ಬಿಜೆಪಿ ಪಾಲಿಕೆ ಸದಸ್ಯ ಕಾಂಗ್ರೆಸ್ ಎಂಎಲ್ಎ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ.
ಬೆಳಗಾವಿಯ ಸದಾಶಿವ ನಗರದಲ್ಲಿ ಶಾಸಕ ಆಸೀಫ್ ಸೇಠ್, ಮೇಯರ್, ಡೆಪ್ಯೂಟಿ ಮೇಯರ್, ಡಿಸಿ ಸಮ್ಮುಖದಲ್ಲಿ ಮೀಸಲಾತಿ ಸಮೀಕ್ಷೆಗೆ ಚಾಲನೆ ನೀಡಲಾಯಿತು‌. ಆದರೆ, ಮೊದಲು ಸದಾಶಿವ ನಗರದ ಪಾಲಿಕೆ ಸದಸ್ಯೆ, ಮಾಜಿ ಮೇಯರ್ ಸವಿತಾ ಕಾಂಬಳೆ ಮನೆಯಿಂದ ಆರಂಭಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಪ್ಲಾನ್ ಮಾಡಲಾಗಿತ್ತು. ಆಪ್ ಡೌನ್‌ಲೋಡ್ ಆಗದಿದ್ದಕ್ಕೆ ಜನ ಸಾಮಾನ್ಯರ ಮನೆಯಿಂದಲೇ ಚಾಲನೆ ನೀಡಲಾಯಿತು. ಆಗ ಸ್ಥಳಕ್ಕೆ ಬಂದ ಬಿಜೆಪಿ ಪಾಲಿಕೆ ಸದಸ್ಯ ಸಂದೀಪ ಜಿರಗ್ಯಾಳರಿಂದ ಪಾಲಿಕೆಯ ಉಪ ಆಯುಕ್ತರ ಜೊತೆಗೆ ವಾಗ್ವಾದ ನಡೆಸಿದರು. ಶಾಸಕರ ಮಾತು ಕೇಳಿ ರಾಜಕಾರಣ ಮಾಡ್ತಿದ್ದಾರಾ? ಎಂದು ಅಧಿಕಾರಿಗೆ ಏರುಧ್ವನಿಯಲ್ಲಿ ಪ್ರಶ್ನಿಸಿದರು‌. ಆಗ ಮಧ್ಯ ಪ್ರವೇಶಿಸಿದ ಶಾಸಕ ಆಶೀಫ್ ಸೇಠ್, ಅಧಿಕಾರಗಳ ಜೊತೆಗೆ ಏರುಧ್ವನಿಯಲ್ಲಿ ಮಾತನಾಬೇಡ ಎಂದರು.
ಇದೇ ವೇಳೆ ಕಾಂಗ್ರೆಸ್ ಶಾಸಕ ಸೇಠ್ ಜೊತೆಗೆ ವಾಗ್ವಾದಕ್ಕೆ ನಿಂತ ಬಿಜೆಪಿ ಪಾಲಿಕೆ ಸದಸ್ಯ ಸಂದೀಪ್ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಅಧಿಕಾರಿಗಳನ್ನ ಅಮಾನತು ಮಾಡಬೇಕು ಎಂದರು. ಪ್ರತಿಯೊಂದಕ್ಕೂ ರಾಜಕಾರಣ, ಸಸ್ಪೆಂಡ್ ಅಂದ್ರೆ ಏನು..? ಸಮೀಕ್ಷೆ ಚಾಲನೆ ವೇಳೆ ಮೇಯರ್, ಉಪ ಮೇಯರ್ ಎಲ್ಲರೂ ಇದ್ದಾರಲ್ಲ. ನನ್ನೊಂದಿಗೆ ಏರುಧ್ವನಿಯಲ್ಲಿ ಮಾತನಾಡದಂತೆ ಪಾಲಿಕೆ ಸದಸ್ಯನಿಗೆ ಶಾಸಕ ಆಸೀಫ್ ಸೇಠ್ ವಾರ್ನ್ ಮಾಡಿದರು.

Exit mobile version