Home ಅಪರಾಧ ಕಾಲು ಜಾರಿ ನದಿಗೆ ಬಿದ್ದು ಗ್ರಾಪಂ ಸದಸ್ಯ ಸಾವು

ಕಾಲು ಜಾರಿ ನದಿಗೆ ಬಿದ್ದು ಗ್ರಾಪಂ ಸದಸ್ಯ ಸಾವು

0

ಗೋಕರ್ಣ: ಮೀನು ಹಿಡಿಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಬೆಟ್ಕುಳಿ ಹತ್ತಿರದ ಅಘನಾಶಿನಿ ನದಿ ಹಿನ್ನೀರಿನಲ್ಲಿ ರವಿವಾರ ರಾತ್ರಿ ನಡೆದಿದೆ. ಬರ್ಗಿ ಗ್ರಾಮ ಪಂಚಾಯತ್ ಸದಸ್ಯ ದಾವೂದ ಘಾರಿಯಾ(೬೭) ಮೃತಪಟ್ಟವರಾಗಿದ್ದಾರೆ. ಇವರು ನಿರಂತರವಾಗಿ ಮೂರು ಬಾರಿ ಬೆಟ್ಕುಳಿ ವಾರ್ಡ್‌ನಿಂದ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುತ್ತಾ ಬಂದಿದ್ದರು. ಕಳೆದ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಪಕ್ಷದಲ್ಲಿ ಸಂಘಟನೆಯ ಸಕ್ರಿಯ ಕಾರ್ಯಕರ್ತರು ಆಗಿದ್ದರು.

Exit mobile version