ಹುಬ್ಬಳ್ಳಿ: ಉಚ್ಚ ನ್ಯಾಯಾಲಯದ ತೀರ್ಪಿಗೆ ಪ್ರತಿಭಟನೆ ಮಾಡಿ ಅಗೌರವ ತೋರಿದ್ದಲ್ಲದೆ ಈಗ ಸಿಬಿಐ ಗೆ ತನಿಖೆ ಅನುಮತಿಯನ್ನು ಕೂಡ ರಾಜ್ಯ ಸರ್ಕಾರ ನಿಷೇಧಿಸಿದೆ. ತಾನು ನಿರಪರಾಧಿ ಯಾವ ತನಿಖೆಗಾದರೂ ನಾನು ಹೆದರುವುದಿಲ್ಲ ಎಂದು ಕೊಚ್ಚಿಕೊಳ್ಳುವ ನಿಮ್ಮ ಯು ಟರ್ನ್ ಏಕೆ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯನವರೇ ಸಂವಿಧಾನ ಎಂದು ಭಾಷಣ ಮಾಡುವ ನೀವು ಸಂವಿಧಾನ ಹಿಡಿದು ಪೋಸ್ ಕೊಡುವ ರಾಹುಲ್ ಗಾಂಧಿ, ಸಂವಿಧಾನದ ಸಂರಕ್ಷಕರಾದ ರಾಜ್ಯಪಾಲರ ಬಗ್ಗೆ ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು ಕುಟುಕಿದ್ದಾರೆ. “ಭ್ರಷ್ಟಾಚಾರ ನಮ್ಮ ಹಕ್ಕು” ಇದು ಕಾಂಗ್ರೆಸ್ ಪಕ್ಷದ ಹೊಸ ಗ್ಯಾರಂಟಿಯೇ? ಎಂದು ಲೇವಡಿ ಮಾಡಿದ್ದಾರೆ.