Home ತಾಜಾ ಸುದ್ದಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ

ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ

0

ಚಿಕ್ಕೋಡಿ: ನಾನು ಸಹ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಲು ಬಿಜೆಪಿ ಪಕ್ಷದಿಂದ ಪ್ರಭಲ ಆಕಾಂಕ್ಷಿಯಾಗಿದ್ದೆ. ಟಿಕೆಟ್ ತಪ್ಪಿದೆ ಅನ್ನೊದರ ಬಗ್ಗೆ ಮಾಹಿತಿ ಬಂತು. ಆದ್ರೆ ಯಾವ ಕಾರಣಕ್ಕಾಗಿ ಟಿಕೆಟ್ ತಪ್ಪಿದೆ ಅನ್ನೊದರ ಬಗ್ಗೆ ಮಾಹಿತಿ ಇಲ್ಲ. ಇದೀಗ ಹೈಕಮಾಂಡ ಚಿಕ್ಕೋಡಿ ಕ್ಷೇತ್ರದಿಂದ ಅಣ್ಣಾಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಅವರ ಗೆಲುವಿಗೆ ಶ್ರಮಿಸಲಾಗುವದು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ ಅವರು, ರಮೇಶ ಕತ್ತಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸ್ತಾರಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಶೇಷವಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನಾನು ೨೦೦೯ರಿಂದ ೨೦೧೪ ಸಂಸದನಾಗಿ ಕ್ಷೇತ್ರದ ಮನೆಯ ಮಗನಾಗಿ ಕೆಲಸ ನಿರ್ವಹಿಸಿದ್ದೇನೆ. ಹೀಗಾಗಿ ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರಲ್ಲಿ ಟಿಕೆಟ್ ಸಿಗುವ ಬಗ್ಗೆ ಅಪಾರವಾದ ನಂಬಿಕೆ ಇತ್ತು. ಆದರೆ ರಮೇಶ ಕತ್ತಿಗೆ ಟಿಕೆಟ್ ಯಾಕೆ ಸಿಕ್ಕಿಲ್ಲ ಅಂತ ಕಾರ್ಯಕರ್ತರಿಗೆ ಸಹಜವಾಗಿ ನೋವಾಗಿದೆ. ಕಾರ್ಯಕರ್ತರಿಂದ ಏನಾದ್ರೂ ಮಾಡಿ ಎಂಬ ಒತ್ತಡ ನನ್ನ ಮೇಲೆ ಬರ್ತಿದೆ.
ಕಾರ್ಯಕರ್ತರೇ ನಮ್ಮ ಆಸ್ತಿ, ಅವರಿಗಿಂತ ದೊಡ್ಡ ಆಸ್ತಿ ನಮಗೆ ಮತ್ತೊಂದಿಲ್ಲ. ಈ ಹಿಂದೆ ನನಗೆ ರಾಜ್ಯಸಭೆ ಸ್ಥಾನ ನೀಡಬೇಕಾಗಿತ್ತು. ಹಿಂದೊಮ್ಮ ರಾಜ್ಯಸಭೆ ಸದಸ್ಯನನ್ನಾಗಿ ಮಾಡ್ತೇನೆ ಎಂದು ಹೈಕಮಾಂಡದವರು ಹೇಳಿದ್ದರು. ಆವಾಗ ಸಹ ಮಾಡಲಿಲ್ಲ. ವಿಧಾನಪರಿಷತ್ ಸದಸ್ಯನನ್ನಾಗಿ ಮಾಡ್ತಿನಿ ಅಂದಿದ್ರು, ಆದರೂ ಸಹ ಮಾಡಲಿಲ್ಲ. ಹೀಗಾಗಿ ಕಳೆದ ಹದಿನಾರು ವರ್ಷಗಳಿಂದ ನಮ್ಮ ಬೆಂಬಲಿಗರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಯಾವುದಕ್ಕೂ ನಾನು ಪಕ್ಷ ಬಿಡುವ ವಿಚಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಗವಾಡ ಶಾಸಕ ರಾಜು ಕಾಗೆ ಕಾಂಗ್ರೆಸ್‌ಗೆ ಆಹ್ವಾನ ಬರುವಂತೆ ತಮ್ಮ ವಿಚಾರ ವಯಕ್ತಪಡಿಸಿದ್ದರು. ಅದನ್ನು ನಾನು ಮಾಧ್ಯಮಗಳಲ್ಲಿ ಅವರ ಆಹ್ವಾನ ಮಾಡಿರುವುದನ್ನು ಗಮನಿಸಿದ್ದೇನೆ. ಆದರೆ ನನಗೆ ಕಾಂಗ್ರೆಸ್‌ನ ಯಾವುದೇ ಮುಖಂಡರು ವೈಯಕ್ತಿಕವಾಗಿ ಭೇಟಿ ಆಗಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರಲ್ಲಿ ಯಾವುದೇ ಅನುಮಾನ ಬೇಡವೆಂದು ಸ್ಪಷ್ಟಿಕರಣ ನೀಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನನ್ನ ನಡುವೆ ನಡೆದ ಮಾತುಕತೆ ಬಗ್ಗೆ ನಾನು ಯಾವುದೆ ಮಾಹಿತಿ ನೀಡುವದಿಲ್ಲ ಎಂದರು.

Exit mobile version