ಬಾಗಲಕೋಟೆ (ಇಳಕಲ್): ನಗರದ ಪೋಲಿಸ್ ಠಾಣೆಯ ಪಕ್ಕದಲ್ಲಿ ಇರುವ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂಬರ್ ೯ ರಲ್ಲಿ ಶೇಖರಣೆಯಾದ ಕಸದ ರಾಶಿಗೆ ಬೆಂಕಿ ಹತ್ತಿ ಅದು ಪೋಲಿಸ್ ಠಾಣೆಯ ವ್ಯಾಪ್ತಿಗೆ ಬಂದು ಹಾಹಾಕಾರ ಎಬ್ಬಿಸಿದ ಪ್ರಸಂಗ ಭಾನುವಾರದಂದು ನಡೆದಿದೆ.
ಪೋಲಿಸ್ ಠಾಣೆಯ ಪಕ್ಕದಲ್ಲೇ ಇರುವ ಶಾಲೆಯಲ್ಲಿ ಕಸದ ರಾಶಿ ಯಾವಾಗಲೂ ಇದ್ದೇ ಇರುತ್ತದೆ ಅದಕ್ಕೆ ಭಾನುವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ ಅದು ಉರಿಯುತ್ತಾ ಉರಿಯುತ್ತಾ ಹಳೆಯ ಪೋಲಿಸ್ ಠಾಣೆಯ ಕಟ್ಟಡಕ್ಕೆ ಹತ್ತಿಕೊಂಡು ಅಲ್ಲಿದ್ದ ಟೈರುಗಳಿಗೆ ತಗಲಿದೆ ಇದರಿಂದಾಗಿ ಗಾಬರಿಗೊಂಡ ಪೋಲಿಸರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿ ವಾಹನ ತರಸಿಕೊಂಡು ಬೆಂಕಿ ನಂದಿಸುವ ಕಾರ್ಯ ಮಾಡಿದೆ.
ಇದರಿಂದಾಗಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿ ನಿಟ್ಟುಸಿರು ಬಿಟ್ಟಿದ್ದಾರೆ ಪೋಲಿಸ್ ಠಾಣೆಯ ಬಳಿ ನಡೆದ ಮೊದಲ ಅಗ್ನಿ ದುರಂತ ಇದಾಗಿದೆ.ಶಾಲೆಯವರಾಗಲಿ ಪೋಲಿಸ್ ಠಾಣೆಯವರಾಗಲಿ ಪರಿಸರ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವದು ಅವಶ್ಯವಾಗಿದ್ದು ಮುಂದಾದರೂ ಇದರ ಬಗ್ಗೆ ಎಚ್ಚರಿಕೆ ವಹಿಸುವದು ಅಗತ್ಯವಾಗಿದೆ.